alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಬ್ಬಾ! ಸರ್ಕಾರಿ ಬ್ಯಾಂಕ್ ಗಳಿಗೆ ಪ್ರತಿ ಗಂಟೆಗೆ ಆಗಿರುವ ನಷ್ಟವೆಷ್ಟು ಗೊತ್ತಾ?

ವಿಜಯ್ ಮಲ್ಯ, ನೀರವ್ ಮೋದಿಯಂತ ಉದ್ಯಮಿಗಳು ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರೂ. ಸಾಲ ಪಡೆದು ರಾತ್ರೋರಾತ್ರಿ ವಿದೇಶಕ್ಕೆ ಪರಾರಿಯಾಗುತ್ತಿದ್ದರೆ, ಅದರ ಹೊರೆಯನ್ನು ದೇಶದ ತೆರಿಗೆದಾರರು ಭರಿಸಬೇಕಾದ ಹೊಣೆ ಹೊರಬೇಕಾಗಿ ಬಂದಿದೆ.

ಇದರ ಮಧ್ಯೆ ಆತಂಕ ಹುಟ್ಟಿಸುವ ಮಾಹಿತಿಯೊಂದು ಬಹಿರಂಗವಾಗಿದ್ದು, 2017-18 ನೇ ಹಣಕಾಸು ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ 21 ಬ್ಯಾಂಕ್ ಗಳು ಪ್ರತಿ ಗಂಟೆಗೆ 9 ಕೋಟಿ ರೂ. ನಷ್ಟವನ್ನು ಅನುಭವಿಸಿವೆ ಎಂದು ಹೇಳಲಾಗಿದೆ.

ವಸೂಲಾಗದ ಸಾಲದ ಮೊತ್ತ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಅದನ್ನು ಸರಿದೂಗಿಸಲು ಬ್ಯಾಂಕ್ ಗಳು ತಮ್ಮ ಆದಾಯ ಮತ್ತು ಲಾಭದಲ್ಲಿ ಪಾಲನ್ನು ತೆಗೆದಿಡಬೇಕಾದ ಕಾರಣ ಈ ಮಟ್ಟದ ನಷ್ಟ ಉಂಟಾಗಲು ಕಾರಣವೆನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...