alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಮಹಿಳಾ ಉದ್ಯೋಗಿಗಳಿಗೆ ನೀಡಿದ್ರೆ ಈ ಸೇವೆ, ಲಾಭವಾಗಲಿದೆ ಕಂಪನಿಗೆ

ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಎಂಬುದು ಯಾವುದೇ ದೇಶದ ಪರೋಕ್ಷ ತೆರಿಗೆ ಪದ್ಧತಿಯ ಬೆನ್ನುಲುಬಾಗಿದೆ. ಈಗ ಜಿಎಸ್‌ಟಿ ಬಂದ ಮೇಲೆ ಇನ್‌ಪುಟ್ ಕ್ರೆಡಿಟ್ ಮೊದಲಿನ ರೀತಿಯಲ್ಲಿಲ್ಲ, ಬದಲಾಗಿದೆ. ಉದ್ಯಮವನ್ನು ನಡೆಸಲು ಸಂಸ್ಥೆಗೆ ಹಲವು ವೆಚ್ಚಗಳಿರುತ್ತವೆ. ಆದರೆ ಎಲ್ಲವೂ ಕ್ರೆಡಿಟ್ ಕ್ಲೈಮ್‌ ವ್ಯಾಪ್ತಿಗೆ ಬರುವುದಿಲ್ಲ. ಉದ್ಯೋಗಿಗಳಿಗೆ ಕೆಲವು ಸೇವೆಗಳನ್ನು ಕಡ್ಡಾಯಗೊಳಿಸಿದ್ದಾಗ್ಯೂ ಅವರಿಗೆ ಒದಗಿಸುವ ಇತರೆ ಸೇವೆಗಳ ವೆಚ್ಚದ ಕ್ರೆಡಿಟ್ ಅನ್ನು ಕ್ಲೈಮ್ ಮಾಡಲು ಸಾಧ್ಯವಾಗುತ್ತಿಲ್ಲ.

ಇದೀಗ ಐಟಿಸಿ ನಿಬಂಧನೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ 28 ನೇ ಜಿಎಸ್‌ಟಿ ಸಮಿತಿ ಕೆಲವು ತಿದ್ದುಪಡಿಗಳನ್ನು ಶಿಫಾರಸು ಮಾಡಿದೆ. ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ಬಳಿಕ ಈ ನಿಯಮಗಳು ಜಾರಿಗೆ ಬರಲಿವೆ.

ಸರ್ಕಾರ ಕಾನೂನು ಮೂಲಕ ಕಡ್ಡಾಯಗೊಳಿಸಿರುವ, ಮಾಲೀಕ ಸಂಸ್ಥೆಗಳು ಉದ್ಯೋಗಿಗಳಿಗೆ ಒದಗಿಸಬೇಕಿರುವ ಸೇವೆಗಳು ಈಗ ಐಟಿಸಿಯ ಅಡಿಯಲ್ಲಿ ಬರುತ್ತವೆ. ಈ ಹಿಂದೆ ಇದರ ಬಗ್ಗೆ ಸಂಶಯವಿತ್ತು. ಇದಕ್ಕೀಗ ಸ್ಪಷ್ಟೀಕರಣ ಸಿಕ್ಕಿದೆ. ಉದಾಹರಣೆಗೆ, ಕಾರ್ಮಿಕ ಗುತ್ತಿಗೆ ಕಾಯಿದೆಯಡಿ, ಮಾಲೀಕರು ತಮ್ಮ ಉದ್ಯೋಗಿಗಳಿಗೆ ಕ್ಯಾಂಟೀನ್ ಸೌಲಭ್ಯ ನೀಡಬೇಕು.

ಈ ತಿದ್ದುಪಡಿಯ ಬಳಿಕ ಮಾಲೀಕರು ಕ್ಯಾಂಟೀನ್‌ಗಾಗಿ ಪಾವತಿಸಿರುವ ಅಥವಾ ತಗಲಿರುವ ಶುಲ್ಕಗಳಿಗೆ ಪಾವತಿಸಿರುವ ಜಿಎಸ್‌ಟಿ ಮೇಲೆ ಟ್ಯಾಕ್ಸ್ ಕ್ರೆಡಿಟ್ ಸೌಲಭ್ಯ ಪಡೆದುಕೊಳ್ಳಬಹುದು. ಅದೇ ರೀತಿ, ಕಾರ್ಖಾನೆಗಳ ಕಾಯ್ದೆ 1948 ಮತ್ತು ಕರ್ನಾಟಕ ಅಂಗಡಿಗಳು ಮತ್ತು ಸ್ಥಾಪನೆಗಳ ಕಾಯ್ದೆ, 1961 ಪ್ರಕಾರ, ರಾತ್ರಿ 8ರ ನಂತರ ಕೆಲಸ ನಿರ್ವಹಿಸುವ ಐಟಿ ಅಥವಾ ಐಟಿಇಎಸ್‌ ಸಂಸ್ಥೆಯ ಮಹಿಳಾ ಉದ್ಯೋಗಿಗಳಿಗೆ ಉಚಿತ ಸಾರಿಗೆ ಸೇವೆಗಳನ್ನು ಒದಗಿಸಬೇಕು. ಹೊಸ ಐಟಿಸಿ ನಿಯಮಗಳು ಜಾರಿಗೊಂಡಾಗ ಈ ಮಾಲೀಕರು ಮಹಿಳಾ ಉದ್ಯೋಗಿಗಳ ಪ್ರಯಾಣದ ಸಾರಿಗೆ ವೆಚ್ಚದಲ್ಲಿ ಪಾವತಿಸಿರುವ ಜಿಎಸ್‌ಟಿಯ ಮೇಲೆ ಐಟಿಸಿ ಕ್ಲೈಮ್ ಮಾಡಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...