alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆಯಲ್ಲಿರುವ ನಿಮ್ಮ ಕಾರಿಗೆ ತಿಂಗಳಿಗೆ 20-30 ಸಾವಿರ ಗಳಿಸುವ ಅವಕಾಶ

ನಿಮ್ಮ ವೈಯಕ್ತಿಕ ಕಾರಿನ ಮೂಲಕವೂ ಪ್ರತಿ ತಿಂಗಳು ಗಳಿಸುವ ಅವಕಾಶ ಸಿಗ್ತಿದೆ. ಅದು ಹೇಗೆ ಅಂದ್ರಾ? ಮೋದಿ ಸರ್ಕಾರ ಈ ಬಗ್ಗೆ ಯೋಜನೆಯೊಂದನ್ನು ರೂಪಿಸ್ತಿದೆ. ಯೋಜನೆ ಕಾರ್ಯರೂಪಕ್ಕೆ ಬಂದಲ್ಲಿ ನೀವು ನಿಮ್ಮ ಸ್ವಂತ ಕಾರಿನ ಮೂಲಕ ಪ್ರತಿ ತಿಂಗಳು 20-30 ಸಾವಿರ ರೂಪಾಯಿ ಗಳಿಸಬಹುದಾಗಿದೆ.

ಸರ್ಕಾರದ ಹೊಸ ನೀತಿ ಅನ್ವಯವಾದ್ರೆ ನೀವು ನಿಮ್ಮ ಕಾರನ್ನು ವೋಲಾ ಅಥವಾ ಉಬರ್ ಸೇವೆಗೆ ಒದಗಿಸಬಹುದು. ಒಂದು ಬಾರಿ ನಿಮ್ಮ ಕಾರು ವೋಲಾ ಅಥವಾ ಉಬರ್ ಜೊತೆ ಸಂಪರ್ಕ ಹೊಂದಿದ್ರೆ ಅದು ನಿಮಗೆ ತಿಂಗಳ ಆದಾಯದ ಒಂದು ಮೂಲವಾಗಲಿದೆ. ತಿಂಗಳಿಗೆ ಆರಾಮವಾಗಿ 20-30 ಸಾವಿರ ರೂಪಾಯಿ ಗಳಿಸಬಹುದಾಗಿದೆ.

ಮಾಧ್ಯಮಗಳ ವರದಿ ಪ್ರಕಾರ ಸರ್ಕಾರ ಆದಷ್ಟು ಬೇಗ ತೆರಿಗೆ ಪರವಾನಿಗೆ ನಿಯಮವನ್ನು ಸರಳಗೊಳಿಸಲಿದೆ. ಇದು ಸರಳವಾದ್ರೆ ಯಾವುದೇ ಕಾರಿನ ಮಾಲೀಕ ತನ್ನ ಕಾರನ್ನು ವೋಲಾ ಅಥವಾ ಉಬರ್ ಜೊತೆ ಸಂಪರ್ಕಿಸಬಹುದಾಗಿದೆ. ಸದ್ಯ ಕಾರು ಮಾಲೀಕ ತನ್ನ ಕಾರನ್ನು ಟ್ಯಾಕ್ಸಿ ರೂಪದಲ್ಲಿ ಬಳಸಬೇಕಾದ್ರೆ ಅನೇಕ ಅನುಮತಿ, ದಾಖಲೆಗಳು ಬೇಕಾಗುತ್ತವೆ. ಜೊತೆಗೆ ವಾಣಿಜ್ಯ ಬಳಕೆಗಾಗಿ ಕಾರನ್ನು ಬಳಸುತ್ತಿದ್ದೇವೆಂಬ ಅನುಮತಿ ಪಡೆದು ಕಾರಿಗೆ ಹಳದಿ ನಂಬರ್ ಪ್ಲೇಟ್ ಹಾಕಬೇಕಾಗುತ್ತದೆ. ಇದಕ್ಕೆಲ್ಲ ತುಂಬ ಸಮಯ ಹಿಡಿಯುತ್ತದೆ.

ಒಂದು ವೇಳೆ ಮೋದಿ ಸರ್ಕಾರ ತೆರಿಗೆ ಪರವಾನಿಗೆ ನಿಯಮ ಸರಳಗೊಳಿಸಿದ್ರೆ ಪ್ರತಿಯೊಬ್ಬ ಕಾರು ಮಾಲೀಕನಿಗೂ ಗಳಿಕೆಗೊಂದು ಅವಕಾಶ ಸಿಗಲಿದೆ. ಈಗಾಗಲೇ ಸರ್ಕಾರ ಒಂದು ತಂಡವನ್ನು ರಚಿಸಿ ಈ ಬಗ್ಗೆ ಮಾಹಿತಿ ಸಿದ್ಧಪಡಿಸಿದೆ. ನಗರಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯ ತಡೆಗೆ ಸಾರ್ವಜನಿಕ ವಾಹನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ರಸ್ತೆಗೆ ಬಿಡುವುದು ಸರ್ಕಾರದ ಉದ್ದೇಶವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...