alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಸಾಡಿದ ವಸ್ತುವಿನಿಂದಲೇ ಕೋಟ್ಯಾಂತರ ರೂ. ಸಂಪಾದಿಸಿದ್ದಾರೆ ದಂಪತಿ

ಬೇಡವೆಂದು ಬಿಸಾಡಿದ ಕಸದಿಂದಲೂ ಕೋಟ್ಯಾಂತರ ರೂಪಾಯಿ ಸಂಪಾದಿಸಬಹುದು. ಇದನ್ನು ಅರಿತವರು ಜೋಧ್ಪುರದ ದಂಪತಿ. ಇದರ ಮೂಲಕವೇ ಈಗ ಕೋಟ್ಯಾಧಿಪತಿಗಳಾಗಿದ್ದಾರೆ. ಜೋಧ್ಪುರದ ಹೃತೇಶ್ ಮತ್ತು ಪ್ರೀತಿ ಲೋಹಿಯಾಗೆ ಕಸದಿಂದ ರಸ ಮಾಡುವ ಕಲೆ ಗೊತ್ತು. ಹಾಗಾಗಿ ಅವರ ಕಂಪನಿ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಲಕ್ಷಾಂತರ ಡಾಲರ್ ವಹಿವಾಟು ನಡೆಸುತ್ತಿದೆ.

ಹಾಳಾದ ಖುರ್ಚಿ, ಖಾಲಿ ಬಾಟಲ್, ಹಳೆಯ ಪ್ಲಾಸ್ಟಿಕ್ ಹೀಗೆ ಸಣ್ಣ ಪುಟ್ಟ ವಸ್ತುಗಳು ಕೆಲಸಕ್ಕೆ ಬಾರದವು ಅಂತಾ ನಾವು ತಿಳಿದುಕೊಂಡಿದ್ದೇವೆ. ಅದನ್ನು ಬಿಸಾಡುತ್ತೇವೆ ಕೂಡ. ಆದ್ರೆ ಹೃತೇಶ್ ಮತ್ತು ಪ್ರೀತಿ ಕಸದಿಂದ ರಸ ತೆಗೆದಿದ್ದಾರೆ. ಅವರು ತಯಾರಿಸಿದ ವಸ್ತುಗಳಿಗೆ ಬಹು ಬೇಡಿಕೆ ಇದೆ. ಪ್ರೀತಿ ಇಂಟರ್ ನ್ಯಾಷನಲ್ ಹೆಸರಿನ ಕಂಪನಿ ಚೀನಾ, ಅಮೆರಿಕಾ ಸೇರಿದಂತೆ 40ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ವ್ಯಾಪಾರ ನಡೆಸುತ್ತಿದೆ.

ಕೈಚೀಲದಿಂದ ಹಿಡಿದು ಮಿಲಿಟರಿ ಟೆಂಟ್, ಪ್ಯಾಂಟ್ ವರೆಗೆ ಅಂತರಾಷ್ಟ್ರೀಯ ಮಟ್ಟದ ಮೂರು ಫ್ಯಾಕ್ಟರಿಯಲ್ಲಿ 400 ಕಾರ್ಮಿಕರಿಂದ ವಸ್ತುಗಳು ಸಿದ್ಧವಾಗುತ್ತಿವೆ. 2003 ರಲ್ಲಿ ಇವರು ಕೆಲಸ ಶುರುಮಾಡಿದ್ದರಂತೆ. ಒಂದು ಡ್ರಮ್ ನಿಂದ ಖುರ್ಚಿ ಹಾಗೂ ಟೇಬಲ್ ಸಿದ್ಧಪಡಿಸಿದ್ದರಂತೆ. ಅದನ್ನು ನೋಡಿದ ಗ್ರಾಹಕನೊಬ್ಬ ಖರೀದಿಗೆ ಮುಂದಾದನಂತೆ. ಇದರಿಂದ ಪ್ರೋತ್ಸಾಹಗೊಂಡ ದಂಪತಿ ಈ ಹಂತಕ್ಕೆ ಬಂದು ನಿಂತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...