alex Certify
ಕನ್ನಡ ದುನಿಯಾ       Mobile App
       

Kannada Duniya

ಸತತ 27ನೇ ದಿನವೂ ಇಳಿಕೆಯಾಯ್ತು ಪೆಟ್ರೋಲ್-ಡಿಸೇಲ್ ಬೆಲೆ

ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ನಿರಂತರ ಇಳಿಕೆಯಾಗ್ತಿದೆ. ಸೋಮವಾರವೂ ಪೆಟ್ರೋಲ್-ಡಿಸೇಲ್ ಬೆಲೆ ಇಳಿದಿದೆ. ತೈಲ ಕಂಪನಿಗಳು ದೇಶದ ನಾಲ್ಕು ಮಹಾನಗರಗಳಲ್ಲಿ ಪೆಟ್ರೋಲ್ ಬೆಲೆಯನ್ನು 14 ಪೈಸೆ ಇಳಿಕೆ ಮಾಡಿವೆ. ಡಿಸೇಲ್ 10 ಪೈಸೆ ಪ್ರತಿ ಲೀಟರ್ ಗೆ ಇಳಿಕೆಯಾಗಿದೆ.

ಸತತ 27 ನೇ ದಿನ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಳಿಕೆಯಾಗಿದೆ. ಮೇ.30 ರಿಂದ ಬೆಲೆಯಲ್ಲಿ ಇಳಿಕೆ ಕಾಣಲು ಶುರುವಾಗಿತ್ತು.

ಮಧ್ಯೆ 2-3 ದಿನ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಒಟ್ಟೂ 27 ದಿನಗಳಲ್ಲಿ  ಪೆಟ್ರೋಲ್ ಬೆಲೆ 3 ರೂಪಾಯಿ ಇಳಿಕೆಯಾಗಿದೆ. ಡಿಸೇಲ್ ಬೆಲೆಯಲ್ಲಿ 2 ರೂಪಾಯಿ ಇಳಿಕೆಯಾಗಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾದ ಕಾರಣ ಹಿಂದಿನ ತಿಂಗಳು ಕೆಲ ನಗರಗಳ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 80 ರೂಪಾಯಿಯಾಗಿತ್ತು. ಈಗ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆಯಾಗಿದೆ. ಸುಮಾರು 6 ಡಾಲರ್ ಪ್ರತಿ ಬ್ಯಾರಲ್ ಗೆ ಕಡಿಮೆಯಾಗಿದೆ ಎನ್ನಲಾಗ್ತಿದೆ. ಸದ್ಯ ಪ್ರತಿ ಬ್ಯಾರಲ್ ಕಚ್ಚಾ ತೈಲದ ಬೆಲೆ 74.10 ಡಾಲರ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...