alex Certify
ಕನ್ನಡ ದುನಿಯಾ       Mobile App
       

Kannada Duniya

ಏಪ್ರಿಲ್ 1 ರಿಂದ ಔಷಧವೂ ದುಬಾರಿ

med

ಅಗತ್ಯ ಔಷಧಗಳ ಬೆಲೆ ಶೇ.2 ರಷ್ಟು ಏರಿಕೆಯಾಗ್ತಿದೆ. ಏಪ್ರಿಲ್ 1ರಿಂದ್ಲೇ ನೂತನ ದರ ಜಾರಿಯಾಗಲಿದೆ. ವಾರ್ಷಿಕ ಬೆಲೆ ಹೆಚ್ಚಳಕ್ಕೆ ಬೇಕಾದ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ‘ರಾಷ್ಟ್ರೀಯ ಔಷಧಿ ದರ ಪ್ರಾಧಿಕಾರ’ ಎಲ್ಲಾ ಕಂಪನಿಗಳಿಗೆ ಸೂಚಿಸಿದೆ. ‘ಔಷಧ ಬೆಲೆ ನಿಯಂತ್ರಣ ಆದೇಶ’ದ ಅಡಿಯಲ್ಲಿ ಔಷಧಗಳ ದರ ಪರಿಷ್ಕರಣೆ ಮಾಡಲಾಗ್ತಿದೆ.

2016 ರಲ್ಲಿ ಔಷಧಗಳ ಬೆಲೆ ಶೇ.1.97 ರಷ್ಟು ಹೆಚ್ಚಳವಾಗಿತ್ತು. ಕ್ಯಾನ್ಸರ್ ಔಷಧದಿಂದ ಹಿಡಿದು ಸಕ್ಕರೆ ಖಾಯಿಲೆ, ಹೈಪರ್ ಟೆನ್ಷನ್, ಹೆಪಟೈಟಿಸ್, ಕಿಡ್ನಿ ಸಮಸ್ಯೆ ಸೇರಿದಂತೆ ಒಟ್ಟು 875 ಔಷಧಗಳ ಬೆಲೆ ದುಬಾರಿಯಾಗಲಿದೆ. ಆ್ಯಂಟಿಬಯೊಟಿಕ್ಸ್, ನೋವು ನಿವಾರಕ ಔಷಧ, ಸ್ಟೆಂಟ್ ಹಾಗೂ ಕಾಂಡೋಮ್ ಗಳ ಬೆಲೆ ಕೂಡ ಹೆಚ್ಚಳವಾಗ್ತಿದೆ.

ಕಳೆದ 2 ವರ್ಷಗಳಿಂದ ಔಷಧಗಳ ಬೆಲೆ ಏರಿಕೆಯ ನಿರೀಕ್ಷೆಯಲ್ಲಿದ್ದ ಫಾರ್ಮಾಸುಟಿಕಲ್ ಕಂಪನಿಗಳಿಗೆ ಇದರಿಂದ ಕೊಂಚ ರಿಲೀಫ್ ಸಿಗಲಿದೆ. ಆದ್ರೆ ರೋಗಿಗಳ ಜೇಬಿಗೆ ಕತ್ತರಿ ಬೀಳೋದು ಗ್ಯಾರಂಟಿ. ಕಳೆದ ಒಂದು ವರ್ಷದಲ್ಲಿ ಕ್ಯಾನ್ಸರ್ ಹಾಗೂ ಸಕ್ಕರೆ ಖಾಯಿಲೆ ಔಷಧಗಳ ಬೆಲೆಯಲ್ಲಿ ಸರ್ಕಾರ ಭಾರೀ ಕಡಿತ ಮಾಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...