alex Certify
ಕನ್ನಡ ದುನಿಯಾ       Mobile App
       

Kannada Duniya

ಜನಸಾಮಾನ್ಯರಿಗೆ ನಾಳೆಯಿಂದ ತಟ್ಟಲಿದೆ ಬೆಲೆ ಏರಿಕೆಯ ಬಿಸಿ

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬಜೆಟ್ ನಲ್ಲಿ ಸಾಲ ಮನ್ನಾ ಮಾಡುವ ಮೂಲಕ ರೈತ ಸಮುದಾಯಕ್ಕೆ ಸಿಹಿ ಸುದ್ದಿ ನೀಡಿದರಾದರೂ ಪೆಟ್ರೋಲ್-ಡೀಸೆಲ್ ಮೇಲಿನ ಸೆಸ್ ಏರಿಸಿ ನಾಡಿನ ಜನತೆಗೆ ಬರೆ ಎಳೆದಿದ್ದಾರೆ.

ಜೊತೆಗೆ ವಿದ್ಯುತ್ ದರವೂ ಏರಿಕೆಯಾಗಿದೆ. ಅಲ್ಲದೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸಲಾಗುತ್ತದೆ ಎಂದು ಭಾವಿಸಲಾಗಿತ್ತಾದರೂ ಅದನ್ನು ಘೋಷಿಸದೆ ಕುಮಾರಸ್ವಾಮಿಯವರು ನಿರಾಸೆ ಮೂಡಿಸಿದ್ದಾರೆ.

ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿಗಳು ಉತ್ತರ ನೀಡಿದ ಬಳಿಕ ತೆರಿಗೆ, ಸೆಸ್ ಏರಿಕೆಗೆ ಸಂಬಂಧಿಸಿದ ಧನ ವಿನಿಯೋಗ ಮಸೂದೆಗಳನ್ನು ಗುರುವಾರ ಸದನದಲ್ಲಿ ಮಂಡಿಸಿದ್ದಾರೆ.

ಇವುಗಳಿಗೆ ಇಂದು ಅನುಮೋದನೆ ಸಿಗಲಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಶನಿವಾರದಿಂದಲೇ ವಿದ್ಯುತ್, ತೈಲ ದುಬಾರಿಯಾಗಲಿವೆ. ತೈಲ ದರ ಏರಿಕೆಯಾದರೆ ಪ್ರಯಾಣ, ದಿನ ಬಳಕೆ ವಸ್ತುಗಳ ದರ ಏರಿಕೆಯಾಗಲಿದ್ದು, ಈ ಮೂಲಕ ಜನಸಾಮಾನ್ಯರ ದೈನಂದಿನ ಜೀವನ ಮತ್ತಷ್ಟು ದುಸ್ತರವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...