alex Certify
ಕನ್ನಡ ದುನಿಯಾ       Mobile App
       

Kannada Duniya

ಅವಧಿಗೂ ಮುನ್ನ PPF ಖಾತೆ ಕ್ಲೋಸ್ ಮಾಡೋದೇಗೆ..?

ಉಳಿತಾಯದ ಮೇಲಿನ ಬಡ್ಡಿದರ ದಿನೇ ದಿನೇ ಕಡಿಮೆಯಾಗ್ತಿದೆ. ಆದ್ರೂ ಸಾರ್ವಜನಿಕ ಭವಿಷ್ಯನಿಧಿ ಅತ್ಯಂತ ಜನಪ್ರಿಯ ಉಳಿತಾಯ ಯೋಜನೆಗಳಲ್ಲೊಂದು ಎನಿಸಿಕೊಂಡಿದೆ. ಇದು ಸರ್ಕಾರಿ ಯೋಜನೆಯಾಗಿದ್ದು, ಸಾಲ ಸೌಲಭ್ಯ, ಅವಧಿಗೂ ಮುನ್ನ ವಿತ್ ಡ್ರಾವಲ್ ಹಾಗೂ ಖಾತೆ ವಿಸ್ತರಣೆಗೆ ಅವಕಾಶವಿದೆ.

ಪಿಪಿಎಫ್ ಖಾತೆಯ ಮೆಚ್ಯೂರಿಟಿ ಅವಧಿ 15 ವರ್ಷ. ಮೆಚ್ಯೂರಿಟಿಯಾಗಿ ಒಂದು ವರ್ಷದೊಳಗೆ ಅದನ್ನು ಇನ್ನೂ ಐದು ವರ್ಷಕ್ಕೆ ವಿಸ್ತರಣೆ ಮಾಡಲು ಅವಕಾಶವಿದೆ. ಅಷ್ಟೇ ಅಲ್ಲ ಅವಧಿಗೂ ಮುನ್ನ ಕೂಡ ನೀವು ಪಿಪಿಎಫ್ ಖಾತೆಯನ್ನು ಕ್ಲೋಸ್ ಮಾಡಬಹುದು.

ಐದು ಹಣಕಾಸು ವರ್ಷಗಳು ಕಳೆದ ಬಳಿಕ ಯಾವುದಾದ್ರೂ ವೈದ್ಯಕೀಯ ಚಿಕಿತ್ಸೆಗಾಗಿ ನೀವು ಪಿಪಿಎಫ್ ಖಾತೆಯನ್ನು ಕ್ಲೋಸ್ ಮಾಡಬಹುದು. ಖಾತೆದಾರರಿಗೆ ಜೀವಕ್ಕೆ ಮಾರಕವಾದ ಯಾವುದಾದ್ರೂ ಖಾಯಿಲೆ ಇದ್ದಲ್ಲಿ, ಪತ್ನಿ ಅಥವಾ ಮಕ್ಕಳಿಗೆ ಸಮಸ್ಯೆಯಾಗಿದ್ದಲ್ಲಿ ಸೂಕ್ತ ದಾಖಲೆಗಳನ್ನು ಸಲ್ಲಿಸಿ ಖಾತೆ ಕ್ಲೋಸ್ ಮಾಡಿಸಬಹುದಾಗಿದೆ.

ಉನ್ನತ ಶಿಕ್ಷಣಕ್ಕಾಗಿ ಕೂಡ ನೀವು ನಿಮ್ಮ ಪಿಪಿಎಫ್ ಖಾತೆಯನ್ನು ಮುಚ್ಚಬಹುದಾಗಿದೆ. ಆದ್ರೆ ಇದಕ್ಕೆ ಕೂಡ ನೀವು ಖಾತೆ ತೆರೆದು ಐದು ಹಣಕಾಸು ವರ್ಷ ಕಳೆದಿರಬೇಕು. ಭಾರತ ಅಥವಾ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಖಾತೆದಾರ ಇಚ್ಛಿಸಿದಲ್ಲಿ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ ಅಕೌಂಟ್ ಕ್ಲೋಸ್ ಮಾಡಬಹುದು.

ಅವಧಿಗೂ ಮುನ್ನ ನೀವು ಸಾರ್ವಜನಿಕ ಭವಿಷ್ಯ ನಿಧಿ ಖಾತೆ ಮುಚ್ಚಿದಲ್ಲಿ ದಂಡ ತೆರಬೇಕಾಗುತ್ತದೆ. ನೀವು ಖಾತೆ ತೆರೆದಾಗಿನಿಂದ ನಿಮ್ಮ ಖಾತೆ ಮೆಚ್ಯೂರ್ ಆಗುವವರೆಗಿನ ಅವಧಿಯಲ್ಲಿ ನೀಡುವ ಬಡ್ಡಿ ಮೇಲೆ ಶೇ.1ರಷ್ಟನ್ನು ಕಡಿತ ಮಾಡಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...