alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ 20 ಪೈಸೆಗೆ ಮಾರಾಟವಾಗ್ತಿದೆ ಆಲೂಗಡ್ಡೆ

ಆಲೂಗಡ್ಡೆ ಬೆಲೆ ಕೆ.ಜಿಗೆ 20 ಪೈಸೆ ಎಂದ್ರೆ ಆಶ್ಚರ್ಯವಾಗೋದು ಖಚಿತ. ಆದ್ರೆ ಇದು ಸತ್ಯ. ಉತ್ತರ ಪ್ರದೇಶ ಆಗ್ರಾದ ಹೋಲ್ಸೇಲ್ ಮಾರುಕಟ್ಟೆಯಲ್ಲಿ ಆಲೂಗಡ್ಡೆ ಬೆಲೆ ಕೆ.ಜಿಗೆ 20 ಪೈಸೆಯಾಗಿದೆ. 50 ಕೆ.ಜಿ ಆಲೂಗಡ್ಡೆ ಬೆಲೆ 10 ರೂಪಾಯಿಯಾಗಿದೆ.

ಎರಡನೇ ಕ್ವಾಲಿಟಿ 50 ಕೆ.ಜಿ ಆಲೂಗಡ್ಡೆ ಪ್ಯಾಕೆಟ್ ಬೆಲೆ 30-40 ರೂಪಾಯಿಗೆ ಮಾರಾಟವಾಗ್ತಿದೆ. ಇದು ರೈತರ ಡೀಸೆಲ್ ಖರ್ಚಿಗೂ ಸಾಕಾಗ್ತಿಲ್ಲ. ಒಂದನೇ ಗುಣಮಟ್ಟದ ಆಲೂಗಡ್ಡೆ ಪ್ಯಾಕೆಟ್ 150-300 ರೂಪಾಯಿಗೆ ಮಾರಾಟವಾಗ್ತಿದೆ. ಆದ್ರೆ ಇದನ್ನು ಬೆಳೆಯಲು ರೈತರು 900 ರೂಪಾಯಿಯವರೆಗೆ ಖರ್ಚು ಮಾಡ್ತಿದ್ದಾರೆ.

ಅತಿ ಕಡಿಮೆ ಬೆಲೆಗೆ ಆಲೂಗಡ್ಡೆ ಮಾರಾಟವಾಗ್ತಿರುವುದ್ರಿಂದ ಬೇಸತ್ತ ರೈತರು ಆಲೂಗಡ್ಡೆ ಪೊಟ್ಟಣವನ್ನು ರಸ್ತೆ, ಗದ್ದೆಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 70 ಲಕ್ಷಕ್ಕೂ ಹೆಚ್ಚು ಪ್ಯಾಕೆಟ್ ಆಲೂಗಡ್ಡೆ ಮಾರಾಟವಾಗದೆ ಹಾಗೆ ಉಳಿದಿದೆ. ಶೀತಲ ಶೇಖರಣಾ ಘಟಕ ಡಿಸೆಂಬರ್ ಅಂತ್ಯದವರೆಗೆ ರೈತರ ಆಲೂಗಡ್ಡೆಯನ್ನು ರಕ್ಷಿಸಿಡಲಿದೆ. ನಂತ್ರ ದುರಸ್ಥಿ ಕಾರಣಕ್ಕೆ ಘಟಕ ಮುಚ್ಚಲಿದೆ. ಈ ವೇಳೆ ರೈತರು ಆಲೂಗಡ್ಡೆಯನ್ನು ರಸ್ತೆಗೆಸೆಯುವುದು ಅನಿವಾರ್ಯವಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...