alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟ್ ತೊರೆದು ಸಾವಿರಾರು ಕೋಟಿ ರೂ. ಗಳ ಉದ್ಯಮ ಕ್ಷೇತ್ರಕ್ಕೆ ಕಾಲಿಡ್ತರಾ ಆರ್ಯಮನ್?

ಆದಿತ್ಯ ಬಿರ್ಲಾ ಗ್ರೂಪ್ ಬಹುರಾಷ್ಟ್ರೀಯ ಸಂಘಟಿತ ವ್ಯಾಪಾರ ಸಂಸ್ಥೆ. ಇದ್ರ ಅಧ್ಯಕ್ಷರು ಕುಮಾರ ಮಂಗಲಂ. 44 ಶತಕೋಟಿ ಡಾಲರ್ ನ ಬಿರ್ಲಾ ಗ್ರೂಪ್ ಉತ್ತರಾಧಿಕಾರಿ ಯಾರು? ಈ ಪ್ರಶ್ನೆ ಎಲ್ಲರನ್ನು ಕಾಡ್ತಿದೆ.

ಅಧ್ಯಕ್ಷ ಕುಮಾರ ಮಂಗಲಂಗೆ ಹೂಡಿಕೆದಾರರ ಚಿಂತೆಗಿಂತ ಮುಂದಿನ ಉತ್ತರಾಧಿಕಾರಿ ಯಾರು ಎಂಬ ಚಿಂತೆ ಕಾಡಲು ಶುರುವಾಗಿದೆ. ಇದಕ್ಕೆ ಬಹುಮುಖ್ಯ ಕಾರಣ ಮಕ್ಕಳಿಬ್ಬರು ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು ಮಾಡಿರುವುದು. ಈ ವಿಷ್ಯವನ್ನು ಸಂದರ್ಶನವೊಂದರಲ್ಲಿ ಬಿರ್ಲಾ ಒಪ್ಪಿಕೊಂಡಿದ್ದಾರೆ. ಬಿರ್ಲಾ ಮಗ ಆರ್ಯಮನ್ ಬಿರ್ಲಾ ವೃತ್ತಿಪರ ಕ್ರಿಕೆಟರ್. ಅವ್ರು ಕ್ರಿಕೆಟ್ ನಲ್ಲಿ ಬ್ಯುಸಿಯಿದ್ದು, ಸದ್ಯ ಬೇರೆ ಕೆಲಸಕ್ಕೆ ಅವ್ರಿಗೆ ಸಮಯವಿಲ್ಲವಂತೆ.

ಇನ್ನು ಮಗಳು ಅನನ್ಯಾ ಮೈಕ್ರೋ ಫೈನಾನ್ಸರ್. ವೃತ್ತಿಯಲ್ಲಿ ಗಾಯಕಿ. ಇಬ್ಬರೂ ಅವ್ರ ವೃತ್ತಿಯಲ್ಲಿ ಬ್ಯುಸಿಯಾಗಿದ್ದಾರೆ. ಇಬ್ಬರೂ ಕಷ್ಟಪಟ್ಟು ಕೆಲಸ ಮಾಡ್ತಿದ್ದಾರೆ. ಇದಕ್ಕಿಂತ ಬೇರೆ ಏನು ಬೇಕು ಪಾಲಕರಿಗೆ ಎಂದು ಬಿರ್ಲಾ ಹೇಳಿದ್ದಾರೆ. ಅನನ್ಯಾ ಸ್ವತಂತ್ರಾ ಮೈಕ್ರೋಫಿನ್ ಕಂಪನಿ ನಡೆಸುತ್ತಿದ್ದಾರೆ. ಗ್ರಾಮೀಣ ಭಾರತದ ಮಹಿಳೆಯರಿಗೆ ಕಿರು ಬಂಡವಾಳ ಒದಗಿಸುವುದು ಈ ಸಂಸ್ಥೆ ಕೆಲಸ. ಕಂಪನಿ ವೆಬ್ಸೈಟ್ ಮೂಲಕವೂ ಕೆಲಸ ಮಾಡ್ತಿದೆ.

ಬಿರ್ಲಾ ಕಂಪನಿಯಲ್ಲಿ ವೃತ್ತಿಪರನಾಗಿ ಕೆಲಸ ಮಾಡ್ತಿದ್ದೇನೆ. ಕುಟುಂಬದ ನಾನೊಬ್ಬ ಸದಸ್ಯ ಮಾತ್ರ ಈ ಬ್ಯುಸಿನೆಸ್ ನಲ್ಲಿ ತೊಡಗಿಕೊಂಡಿದ್ದೇನೆ. ಅವ್ರು ಕೈ ಜೋಡಿಸುತ್ತಾರೆಂಬ ವಿಶ್ವಾಸವಿದೆ ಎಂದು ಬಿರ್ಲಾ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...