alex Certify
ಕನ್ನಡ ದುನಿಯಾ       Mobile App
       

Kannada Duniya

ದಾಳಿಂಬೆ ಬೆಲೆ ಕೇಳಿದ್ರೇ ತಿರುಗುತ್ತೆ ತಲೆ

ದಾಳಿಂಬೆ ಬೆಲೆ ಏರುಗತಿಯಲ್ಲಿದ್ದು, ಕಳೆದ 5 ವರ್ಷದಲ್ಲೇ ಅಧಿಕ ದರ ದಾಖಲಿಸಿದೆ. ಪ್ರತಿ ಕೆ.ಜಿ.ಗೆ 180 ರೂ.ನಿಂದ 200 ರೂ.ವರೆಗೂ ಮಾರಾಟವಾಗ್ತಿದೆ.

ಕರ್ನಾಟಕ ಮತ್ತು ಮಹಾರಾಷ್ಟ್ರ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಗುಣಮಟ್ಟದ ದಾಳಿಂಬೆಗೆ ಹೆಚ್ಚಿನ ಬೇಡಿಕೆ ಇದೆ. ರಫ್ತು ಗುಣಮಟ್ಟದ ದಾಳಿಂಬೆ ಕೆ.ಜಿ.ಗೆ 200 ರೂ. ವರೆಗೂ ದರ ಇದೆ. ಇದಕ್ಕಿಂತ ಕಡಿಮೆ ದರ್ಜೆಯ ದಾಳಿಂಬೆಗೆ 140 ರೂ. ವರೆಗೂ ದರ ಇದೆ.

ಸತತ 5 ವರ್ಷಗಳಿಂದ ಅನಾವೃಷ್ಟಿ, ಅತಿವೃಷ್ಠಿ, ರೋಗ ಮೊದಲಾದ ಕಾರಣಗಳಿಂದ ದಾಳಿಂಬೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಬಾರಿ ಉತ್ತಮ ಫಸಲು ಬಂದಿರುವ ಕಾರಣ ರೈತರಲ್ಲಿ ಮಂದಹಾಸ ಮೂಡಿಸಿದೆ. ಬೇಸಿಗೆ ಆರಂಭದ ದಿನದಿಂದಲೂ ದಾಳಿಂಬೆಗೆ ಉತ್ತಮ ಧಾರಣೆ ಇದೆ. ಆದರೆ, ಗ್ರಾಹಕರು ಮಾತ್ರ ದಾಳಿಂಬೆ ಬೆಲೆ ಕೇಳಿ ಕಡಿಮೆ ಪ್ರಮಾಣದಲ್ಲಿ ಖರೀದಿಸುವಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...