alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಲಾಕ್ ಆಗಬಹುದು ನಿಮ್ಮ ATM ಕಾರ್ಡ್

pnb-atmd

ನವದೆಹಲಿ: ನೀವು ಬಳಸುತ್ತಿರುವ ಎ.ಟಿ.ಎಂ. ಕಾರ್ಡ್ ಬ್ಲಾಕ್ ಆಗಬಹುದಾದ ಸಾಧ್ಯತೆ ಇದೆ. ಈಗಿರುವ ಮ್ಯಾಸ್ಟ್ರೋ ಡೆಬಿಟ್ ಕಾರ್ಡ್ ಅನ್ನು ಬದಲಾಯಿಸಿಕೊಳ್ಳಲು ಗ್ರಾಹಕರಿಗೆ ಸೂಚಿಸಲಾಗಿದೆ.

ಜುಲೈ 31 ರೊಳಗೆ ಹೊಸ ಇ.ಎಂ.ವಿ. ಚಿಪ್ ಇರುವ ಡೆಬಿಟ್ ಕಾರ್ಡ್ ಗೆ ಬದಲಿಸಿಕೊಳ್ಳುವಂತೆ ತನ್ನ ಗ್ರಾಹಕರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ ಮುನ್ನೆಚ್ಚರಿಕೆ ಸಂದೇಶವನ್ನು ನೀಡಲಾಗಿದೆ.

ಈ ತಿಂಗಳ ಅಂತ್ಯದ ವೇಳೆಗೆ ಹೆಚ್ಚು ಸುರಕ್ಷಿತವಾದ EMV ಚಿಪ್ ಆಧಾರಿತ ಕಾರ್ಡ್ ನೊಂದಿಗೆ ಬದಲಿಸಿಕೊಳ್ಳದ ಮ್ಯಾಸ್ಟ್ರೋ ಡೆಬಿಟ್ ಕಾರ್ಡ್ ಗಳನ್ನು ಹೊಂದಿರುವವರು ತೊಂದರೆ ಎದುರಿಸಬೇಕಾಗಬಹುದು ಎಂದು ಹೇಳಲಾಗಿದೆ.

ನಿಮ್ಮ ಮ್ಯಾಸ್ಟ್ರೋ ಡೆಬಿಟ್ ಕಾರ್ಡ್ ಗಳನ್ನು ಪಂಜಾಬ್ ನ್ಯಾಷನಲ್ ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಉಚಿತವಾಗಿ ಬದಲಿಸಕೊಳ್ಳಬಹುದಾಗಿದೆ ಎಂದು PNB ತನ್ನ ಗ್ರಾಹಕರಿಗೆ ತಿಳಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಸಲಹಾ ಸಮಿತಿಯ ಪ್ರಕಾರ, 2018 ರ ಡಿಸೆಂಬರ್ 31 ರೊಳಗೆ ಅಸ್ತಿತ್ವದಲ್ಲಿರುವ ಕಾರ್ಡ್ ಗಳನ್ನು EMV ಚಿಪ್ ಆಧಾರಿತ ಕಾರ್ಡ್ ನೊಂದಿಗೆ ಬದಲಿಸಿಕೊಳ್ಳಬೇಕಿದೆ.

2016 ರ ಜನವರಿ 31 ರಿಂದ ಬ್ಯಾಂಕ್ ಗಳು EMV ಚಿಪ್ ಆಧಾರಿತ ಕಾರ್ಡ್ ಗಳನ್ನು ಮಾತ್ರ ನೀಡಲು ನಿರ್ದೇಶಿಸಲ್ಪಟ್ಟಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...