alex Certify
ಕನ್ನಡ ದುನಿಯಾ       Mobile App
       

Kannada Duniya

ನೀರವ್ ಮೋದಿ ಗ್ರೂಪ್ ಗೆ ಸೇರಿದ ಠೇವಣಿ, ಷೇರು ಜಪ್ತಿ

ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ ವಂಚಿಸಿ ವಿದೇಶಕ್ಕೆ ಹಾರಿರುವ ಉದ್ಯಮಿ ನೀರವ್ ಮೋದಿ ಆಸ್ತಿಯನ್ನೆಲ್ಲ ಜಾರಿ ನಿರ್ದೇಶನಾಲಯ ತಡಕಾಡುತ್ತಿದೆ. ನೀರವ್ ಮೋದಿ ಗ್ರೂಪ್ ಗೆ ಸೇರಿದ ಡೆಪಾಸಿಟ್ ಮತ್ತು ಷೇರುಗಳನ್ನೆಲ್ಲ ಫ್ರೀಝ್ ಮಾಡಿದೆ.

ಇವುಗಳ ಮೌಲ್ಯ ಸುಮಾರು 44 ಕೋಟಿ ರೂಪಾಯಿ. ಅಷ್ಟೇ ಅಲ್ಲ ವಜ್ರದ ಉದ್ಯಮಿಗೆ ಸೇರಿದ ಕೆಲವು ದುಬಾರಿ ವಾಚುಗಳನ್ನು ಕೂಡ ವಶಕ್ಕೆ ಪಡೆದಿದೆ. ಇವೆಲ್ಲವೂ ಇಂಪೋರ್ಟೆಡ್ ವಾಚುಗಳು. 176 ಸ್ಟೀಲ್ ಅಲ್ಮೇರಾಗಳು, 158 ಬಾಕ್ಸ್ ಗಳು ಹಾಗೂ 60 ಇತರ ಕಂಟೇನರ್ ಗಳನ್ನು ಕಳೆದ ವಾರವೇ ಜಪ್ತಿ ಮಾಡಲಾಗಿತ್ತು.

ಡೆಪಾಸಿಟ್, ಷೇರುಗಳು ಹಾಗೂ ವಶಪಡಿಸಿಕೊಳ್ಳಲಾದ ದುಬಾರಿ ಕಾರುಗಳ ಒಟ್ಟಾರೆ ಮೌಲ್ಯ 100 ಕೋಟಿ ರೂಪಾಯಿ ಅಂತಾ ಅಂದಾಜಿಸಲಾಗಿದೆ. ಇನ್ನೊಂದೆಡೆ ನೀರವ್ ಮೋದಿ ಸಂಬಂಧಿ, ಗೀತಾಂಜಲಿ ಜ್ಯುವೆಲರ್ಸ್ ಪ್ರಮೋಟರ್ ಮೆಹುಲ್ ಚೋಕ್ಸಿಯ ಆಸ್ತಿಯನ್ನು ಕೂಡ ತನಿಖೆಗೆ ಒಳಪಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...