alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಉದ್ಘಾಟಿಸುವ ಮೊಬೈಲ್ ಕಾರ್ಖಾನೆಯಲ್ಲಿ ಉತ್ಪಾದನೆಯಾಗಲಿದೆ 12 ಕೋಟಿ ಫೋನ್

ಉತ್ತರ ಪ್ರದೇಶದ ನೋಯ್ಡಾದಲ್ಲಿ ಸ್ಯಾಮ್ಸಂಗ್ ಕಂಪನಿಯ ದೊಡ್ಡ ಕಾರ್ಖಾನೆಯೊಂದು ಉದ್ಘಾಟನೆಯಾಗ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದಕ್ಕೆ ಚಾಲನೆ ನೀಡಲಿದ್ದಾರೆ. ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಆದತ್ಯನಾಥ್, ದಕ್ಷಿಣ ಕೋರಿಯಾ ಅಧ್ಯಕ್ಷ ಮೂನ್ ಜೇ ಸೇರಿದಂತೆ ಅನೇಕ ಗಣ್ಯರು ಕಾರ್ಖಾನೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ರಸ್ತೆ ಮಾರ್ಗವಾಗಿ ದೆಹಲಿಯಿಂದ ನೋಯ್ಡಾಗೆ ಬರಲಿದ್ದಾರೆ. ಸಂಜೆ 5.30 ರ ಸುಮಾರಿಗೆ ನೋಯ್ಡಾ ತಲುಪಲಿದ್ದಾರೆ. ಇದೇ ಮೊದಲ ಬಾರಿಗೆ ಕೊರಿಯನ್ ಕಂಪನಿ ದೇಶದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡ್ತಿದೆ. ಸ್ಯಾಮ್ಸಂಗ್ ನ ಈ ಹೊಸ ಕಾರ್ಖಾನೆಯಲ್ಲಿ ವಾರ್ಷಿಕ ಸುಮಾರು 12 ಕೋಟಿ ಮೊಬೈಲ್ ಸಿದ್ಧವಾಗುವ ನಿರೀಕ್ಷೆಯಿದೆ.

ಉತ್ತರ ಪ್ರದೇಶ ಸರ್ಕಾರ ಸ್ಯಾಮ್ಸಂಗ್ ಕಂಪನಿಗೆ ಜಿಎಸ್ಟಿಯಿಂದ ರಿಯಾಯಿತಿ ನೀಡುವ ಭರವಸೆಯನ್ನು ನೀಡಿದೆ. ವಿಶ್ವ ಭೂಪಟದಲ್ಲಿ ಅತಿದೊಡ್ಡ ಮೊಬೈಲ್ ಕಾರ್ಖಾನೆ ಹೊಂದಿರುವ ಪ್ರದೇಶವೆಂಬ ಹೆಗ್ಗಳಿಕೆಗೆ ಉತ್ತರ ಪ್ರದೇಶದ ನೋಯ್ಡಾ ಪಾತ್ರವಾಗಲಿದೆ.

ಹಿಂದಿನ ವರ್ಷವೇ ನೋಯ್ಡಾದಲ್ಲಿ ಸ್ಥಾವರ ವಿಸ್ತಾರ ಮಾಡುವುದಾಗಿ ಸ್ಯಾಮ್ಸಂಗ್ ಕಂಪನಿ ಹೇಳಿತ್ತು. 4,915 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಹೇಳಿತ್ತು. ಭಾರತದಲ್ಲಿ ಸ್ಯಾಮ್ಸಂಗ್ ಕಂಪನಿ ಪ್ರಸ್ತುತ ವಾರ್ಷಿಕ 6.7 ಕೋಟಿ ಮೊಬೈಲ್ ತಯಾರಿಸುತ್ತಿದೆ. ಇನ್ಮುಂದೆ 12 ಕೋಟಿ ಮೊಬೈಲ್ ಸಿದ್ಧವಾಗಲಿದೆ. ಮೊಬೈಲ್ ಜೊತೆ ಸ್ಯಾಮ್ಸಂಗ್ ನ ಇತರ ವಸ್ತುಗಳು ಉತ್ಪಾದನೆಯಲ್ಲೂ ಹೆಚ್ಚಳವಾಗಲಿದೆ ಎಂದು ಕಂಪನಿ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...