alex Certify
ಕನ್ನಡ ದುನಿಯಾ       Mobile App
       

Kannada Duniya

ಆಗಸ್ಟ್ 21 ರಿಂದ ಅಂಚೆ ಪೇಮೆಂಟ್ಸ್ ಬ್ಯಾಂಕ್ ಆರಂಭ

ಪ್ರಧಾನಿ ನರೇಂದ್ರ ಮೋದಿಯವರು ಅಂಚೆ ಪೇಮೆಂಟ್ಸ್ ಬ್ಯಾಂಕ್ ಗೆ ಆಗಸ್ಟ್ 21 ರಂದು ಚಾಲನೆ ನೀಡಲಿದ್ದಾರೆ. ಪ್ರತಿ ಜಿಲ್ಲೆಗೆ ಒಂದರಂತೆ ಗ್ರಾಮೀಣ ಹಣಕಾಸು ಸೇವೆಗೆ ಅನುಕೂಲವಾಗುವಂತೆ ಶಾಖೆ ಸ್ಥಾಪಿಸಲಾಗುವುದು ಎಂದು ತಿಳಿದು ಬಂದಿದೆ. ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿದವರು, ಎನ್.ಇ.ಎಫ್.ಟಿ, ಆರ್.ಟಿ.ಜಿ.ಎಸ್, ಐ.ಎಂ.ಪಿ.ಎಸ್. ಹಾಗೂ ಬಿಲ್ ಪಾವತಿಗೆ ಸೇವೆಗಳು ಲಭ್ಯವಾಗಲಿವೆ.

650 ಶಾಖೆಗಳಲ್ಲಿ ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಸೇವೆ ಆರಂಭವಾಗಲಿದೆ. ಜತೆಗೆ ಅಂಚೆ ಕಚೇರಿಗಳ ಪಕ್ಕದಲ್ಲೇ 3,250 ಆಕ್ಸೆಸ್ ಪಾಯಿಂಟ್‌ಗಳನ್ನು ಸ್ಥಾಪಿಸಲಾಗುವುದು. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ 11,000 ಅಂಚೆ ಸಿಬ್ಬಂದಿಯು ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಗಳನ್ನು ತಲುಪಿಸಲಿದ್ದಾರೆ.

ಪೋಸ್ಟ್ ನಲ್ಲಿರುವ ಉಳಿತಾಯ ಖಾತೆಗಳನ್ನು ಐಪಿಬಿಬಿ ಅಡಿ ತರಲು ಸರ್ಕಾರ ಹಸಿರು ನಿಶಾನೆ ನೀಡಿದೆ ಎಂದು ತಿಳಿದು ಬಂದಿದೆ. ಇನ್ನು ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಖಾತೆ ಹೊಂದಿದವರಿಗೆ, ಇತರೆ ಬ್ಯಾಂಕ್ ನಲ್ಲಿ ನೀಡುವ ಸೌಲಭ್ಯಗಳು ಸಿಗಲಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...