alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಮಾರ್ಟ್ ಫೋನ್ ಖರೀದಿಸುವವರಿಗೊಂದು ಶಾಕಿಂಗ್ ಸುದ್ದಿ

ತುಂಬಾ ದಿನಗಳಿಂದ ನಿಮಗೆ ಸ್ಮಾರ್ಟ್ ಫೋನ್ ಕೊಳ್ಳುವ ಯೋಚನೆ ಇದ್ಯಾ..? ದೀಪಾವಳಿಯ ಡಿಸ್ಕೌಂಟ್ ನಂಬಿಕೊಂಡು ನೀವು ಅಂದು ಫೋನ್ ಕೊಳ್ಳೋ ಯೋಚನೆ ಮಾಡ್ತಿದ್ದೀರಾ..? ಹಾಗಾದ್ರೆ ನಿಮ್ಮ ಯೋಚನೆ ಬದಲಿಸಿಕೊಳ್ಳೋದು ಉತ್ತಮ. ದೀಪಾವಳಿಯ ಡಿಸ್ಕೌಂಟ್ ಸೇಲ್ ಈ ಈ ಬಾರಿ ನಿಮ್ಮನ್ನ ನಿರಾಸೆಗೊಳಿಸುವ ಸಾಧ್ಯತೆಗಳು ಹೆಚ್ಚಿದೆ.

ಯಾಕಂದ್ರೆ ನೀವಂದುಕೊಳ್ಳುವ ಹಾಗೆ ಸ್ಮಾರ್ಟ್ ಫೋನ್ ಬೆಲೆಯಲ್ಲಿ ಯಾವುದೇ ರಿಯಾಯಿತಿ ಸಿಗೋದಿಲ್ಲ. ಬದಲಾಗಿ ಹೆಚ್ಚಾಗುವ ಸಾಧ್ಯತೆಗಳಿವೆ. ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿಯುತ್ತಿರುವ ಹಿನ್ನಲೆಯಲ್ಲಿ ದೀಪಾವಳಿಗೆ ಭರ್ಜರಿ ಶಾಪಿಂಗ್ ಮಾಡೋರಿಗೆ ಯಾವುದೇ ರಿಯಾಯಿತಿ ನೀಡದೆ ಇರೋದಕ್ಕೆ ಮೊಬೈಲ್ ತಯಾರಿಕಾ ಸಂಸ್ಥೆಗಳು ಕೂಡ ನಿರ್ಧರಿಸಿವೆಯಂತೆ.

ಮೊಬೈಲ್ ಕ್ಷೇತ್ರದ ದಿಗ್ಗಜ ಕಂಪನಿಗಳಾದ ಕ್ಸಿಯೋಮಿ ಮತ್ತು ಸ್ಯಾಮ್ಸಂಗ್ ಬ್ರ್ಯಾಂಡ್ ಗಳಲ್ಲಿ ಕೂಡ ಮಾರಾಟದ ಬೆಲೆಯಲ್ಲಿ ವಿನಾಯಿತಿ ಸಿಗುವ ಸಾಧ್ಯತೆಗಳು ಕಡಿಮೆ. ಕುಸಿಯುತ್ತಿರುವ ರೂಪಾಯಿ ಮೌಲ್ಯ ಎಲ್ಲಾ ಬ್ರ್ಯಾಂಡ್ ಗಳನ್ನು ಚಿಂತೆಗೀಡು ಮಾಡಿದೆಯಂತೆ.

ಆದ್ರೆ ಆನ್ಲೈನ್ ಖರೀದಿದಾರರಿಗೆ ಕೊಂಚ ಮಟ್ಟಿನ ರಿಯಾಯಿತಿ ಸಿಗುವ ಸಾಧ್ಯತೆಗಳಿವೆ. ಆದ್ರೆ ಅದು ಆಷ್ಟು ಸುರಕ್ಷಿತವೂ ಅಲ್ಲ. ಮೊಬೈಲ್ ಉತ್ಪನ್ನಗಳನ್ನ ಒಂದು ಬಾರಿ ಖುದ್ದು ಪರೀಕ್ಷೆ ಮಾಡಿ ತೆಗೆದುಕೊಳ್ಳೋದು ಉತ್ತಮ ಅಂತಾರೆ ಮಾರುಕಟ್ಟೆ ಪರಿಣಿತರು.

10 ಸಾವಿರದಿಂದ 20 ಸಾವಿರ ಬೆಲೆಯ ಫೋನ್ ಗಳ ಮಾರುಕಟ್ಟೆ ದರದಲ್ಲಿ ಹೆಚ್ಚೆಂದರೆ ಶೇಕಡಾ 7 ರಷ್ಟು ವಿನಾಯಿತಿ ಸಿಗೋದು ಕೂಡ ಈ ಸಂದರ್ಭದಲ್ಲಿ ಕಷ್ಟ ಎನ್ನಲಾಗ್ತಿದೆ. ಹಾಗಾಗಿ ದೀಪಾವಳಿಗೆ ಸ್ಮಾರ್ಟ್ ಫೋನ್ ಕೊಳ್ಳುವ ಯೋಚನೆ ಇದ್ರೆ ಅದನ್ನು ಪೋಸ್ಟ್ ಪೋನ್ ಮಾಡಿಕೊಳ್ಳೋದು ಒಳ್ಳೆಯದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...