alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರು ಖರೀದಿದಾರರಿಗೆ ಶಾಕಿಂಗ್ ನ್ಯೂಸ್…!

ನವದೆಹಲಿ: ಹೊಸ ವರ್ಷಕ್ಕೆ ಹೊಸ ಕಾರು ಖರೀದಿಸಬೇಕೆಂದು ಪ್ಲಾನ್ ಮಾಡಿಕೊಂಡವರಿಗೊಂದು ಮಾಹಿತಿ ಇಲ್ಲಿದೆ. ಹೊಸ ವರ್ಷದಿಂದ ಕಾರುಗಳ ದರ ಏರಿಕೆಯಾಗಲಿದ್ದು, ಇದಕ್ಕಾಗಿ ಕಂಪನಿಗಳು ಸಿದ್ಧತೆ ಮಾಡಿಕೊಂಡಿವೆ.

ಮೆಟಲ್, ಬಿಡಿಭಾಗಗಳು ಸೇರಿದಂತೆ ಕಾರು ತಯಾರಿಕಾ ವೆಚ್ಚದಲ್ಲಿ ಏರಿಕೆಯಾಗಿರುವ ಕಾರಣ, ಕಾರುಗಳ ದರ ಏರಿಕೆಗೆ ನಾನಾ ಕಂಪನಿಗಳು ಮುಂದಾಗಿವೆ.

ಹೋಂಡಾ ಕಂಪನಿ ಕಾರುಗಳ ಬೆಲೆಯಲ್ಲಿ 25,000 ರೂ. ವರೆಗೆ, ಟೊಯೊಟಾ ಕಾರುಗಳ ಬೆಲೆಯಲ್ಲಿ 5,000 ರೂ.ನಿಂದ 1.1 ಲಕ್ಷ ರೂ.ವರೆಗೆ, ಎಂ ಅಂಡ್ ಎಂ ಕಾರುಗಳ ಬೆಲೆಯಲ್ಲಿ 7,000 ರೂ.ನಿಂದ 30,000 ರೂ.ವರೆಗೆ ಏರಿಕೆಯಾಗಲಿದೆ.

ಅದೇ ರೀತಿ ಇಸುಜು ಕಂಪನಿಯ ಕಾರುಗಳ ಬೆಲೆಯಲ್ಲಿ 15,000 ರೂ.ನಿಂದ 1 ಲಕ್ಷ ರೂ. ವರೆಗೆ, ಸ್ಕೋಡಾ ಕಾರುಗಳು 14,000 ರೂ.ನಿಂದ 50,000 ರೂ. ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಮಹೀಂದ್ರಾ ಅಂಡ್ ಮಹೀಂದ್ರಾ ಕಾರುಗಳು 7000 ರೂ.ನಿಂದ 30,000 ರೂ.ವರೆಗೆ ಏರಿಕೆಯಾಗಲಿವೆ.

ದೇಶದ ಪ್ರಮುಖ ಕಾರು ತಯಾರಿಕಾ ಕಂಪನಿಗಳಾಗಿರುವ ಮಾರುತಿ ಸುಜುಕಿ, ಹುಂಡೈ ಮೋಟಾರ್ ಇಂಡಿಯಾ ಸದ್ಯಕ್ಕೆ ದರ ಹೆಚ್ಚಳದ ಬಗ್ಗೆ ಯೋಚಿಸಿಲ್ಲ. ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ ಶೇ. 3 ರಷ್ಟು ದರ ಹೆಚ್ಚಿಸಲು ಯೋಜಿಸಿದೆ.

ಹೋಂಡಾ ಕಾರ್ಸ್ ಇಂಡಿಯಾ ಶೇ. 1 ರಿಂದ ಶೇ. 2 ರಷ್ಟು, ಸ್ಕೋಡಾ ಆಟೋ ಶೇ. 2 ರಿಂದ 3 ರಷ್ಟು ದರ ಏರಿಕೆ ಮಾಡುವ ಅಂದಾಜಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...