alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ಖರೀದಿಸುವರಿಗೊಂದು ಬ್ಯಾಡ್ ನ್ಯೂಸ್

ಮೊಬೈಲ್ ಖರೀದಿಸಲು ಏನಾದರೂ ಪ್ಲಾನ್ ಹಾಕಿಕೊಂಡಿದ್ದರೆ, ನಿಮಗೊಂದು ಕಹಿ ಸುದ್ದಿ. ಹೌದು, ಕೇಂದ್ರ ಸರ್ಕಾರ ಕೆಲ ದಿನಗಳ ಹಿಂದಷ್ಟೆ ಆಮದು ಶುಲ್ಕವನ್ನು ಏರಿಸುವ ಬಗ್ಗೆ ಚಿಂತನೆ ನಡೆಸಿದ್ದ ಮುಂದುವರಿದ ಭಾಗವಾಗಿ, ಆಮದಾಗುವ ಮೊಬೈಲ್, ಸ್ಮಾರ್ಟ್ ವಾಚ್ ಸೇರಿದಂತೆ ಇತರೆ ಎಲೆಕ್ಟ್ರಿಕ್ ಹಾಗೂ ಸಂವಹನ ಉಪಕರಣಗಳ ಸುಂಕ ತೆರಿಗೆ ಮತ್ತಷ್ಟು ಏರಿಸಲು ನಿರ್ಧರಿಸಿದೆ.

ದಿನದಿಂದ ದಿನಕ್ಕೆ ಡಾಲರ್ ಮುಂದೆ ಕುಸಿಯುತ್ತಿರುವ ರೂಪಾಯಿ ಮೌಲ್ಯವನ್ನು ಉಳಿಸಲು ಈ ಕ್ರಮ ಅಗತ್ಯವೆಂದು ಅಭಿಪ್ರಾಯಪಟ್ಟಿರುವ ಹಣಕಾಸು ಇಲಾಖೆ ಅಧಿಕಾರಿಗಳು, ಸುಂಕ‌ ತೆರಿಗೆ ಏರಿಕೆಯಿಂದ ಅಮೆರಿಕಾ ಹಾಗೂ ಚೀನಾದ ವಸ್ತುಗಳ‌ ಮೇಲೆ ನಿಯಂತ್ರಣ ಸಾಧಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೇಕ್ ಇಂಡಿಯಾ ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಯೋಜನೆ ರೂಪಿಸಲಾಗಿದೆ ಎನ್ನಲಾಗುತ್ತಿದ್ದರೂ, ಡಾಲರ್ ಮುಂದೆ ರೂಪಾಯಿ ಅಪಮೌಲ್ಯವಾಗುವುದನ್ನು ತಪ್ಪಿಸಲು ಈ ಮಾರ್ಗ ಸಹಕಾರಿಯಾಗಿಲಿದೆ. ಆದರೆ ಎಷ್ಟು ಸುಂಕ ಹಾಗೂ ಎಂದಿನಿಂದ ಜಾರಿಯಾಗುತ್ತದೆ ಎನ್ನುವ ಮಾಹಿತಿ ಸ್ಪಷ್ಟವಾಗಿಲ್ಲ. ಕೇಂದ್ರದ ಈ‌ ನಿರ್ಧಾರದಿಂದ ಸ್ಯಾಮ್‌ಸಂಗ್‌, ಸಿಸ್ಕೋ, ಎರಿಕ್ಸನ್, ನೋಕಿಯಾ ಸೇರಿದಂತೆ ಹಲವು ಕಂಪನಿಗೆ ಭಾರಿ ಹೊಡೆತ ಬೀಳಲಿದೆ ಎನ್ನಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...