alex Certify
ಕನ್ನಡ ದುನಿಯಾ       Mobile App
       

Kannada Duniya

ಕುಳಿತಲ್ಲಿಂದ್ಲೇ ಲೈಟ್ ಆನ್, ಆಫ್ ಮಾಡಿ ಆರಾಮಾಗಿ….

PHILIPSಕೆಲವೊಮ್ಮೆ ಬಾತ್ ರೂಮ್ ನಲ್ಲೋ, ಅಡುಗೆ ಮನೆಯಲ್ಲೋ ಲೈಟ್  ಆಫ್ ಮಾಡೋದನ್ನೇ ಮರೆತು ಬಂದಿರ್ತೀರಾ. ಅಯ್ಯೋ ಮತ್ಯಾರೋ ಹೋಗಿ ಆಫ್ ಮಾಡ್ತಾರೆ ಅನಿಸೋದೂ ಉಂಟು.

ಆದ್ರೆ ಇನ್ಮೇಲೆ ಲೈಟ್ ಆಫ್ ಅಥವಾ ಆನ್ ಮಾಡಲು ನೀವು ಅಲ್ಲಿಯ ತನಕ ಹೋಗಬೇಕಾಗಿಲ್ಲ. ಕುಳಿತಲ್ಲಿಂದ್ಲೇ ಮಾಡ್ಬಹುದು. ಯಾಕಂದ್ರೆ ಫಿಲಿಪ್ಸ್ ಕಂಪನಿ Hue ಎಂಬ ಮೋಶನ್ ಸೆನ್ಸಾರ್ ಒಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡ್ತಾ ಇದೆ. ಇದರ ಬೆಲೆ 40 ಡಾಲರ್.

ಬಳಕೆದಾರರ ಚಲನವಲನದ ಮೇಲೆ ಸ್ವಿಚ್ ಆಫ್ ಮಾಡ್ಬೇಕೋ ಅಥವಾ ಆನ್ ಮಾಡ್ಬೇಕೋ ಅನ್ನೋದನ್ನು ಇದು ಪತ್ತೆ ಮಾಡುತ್ತೆ. 100 ಡಿಗ್ರಿಯಲ್ಲಿ ಲಂಬ ಅಥವಾ ಅಡ್ಡವಾಗಿ 16 ಅಡಿ ಎತ್ತರದವರೆಗೆ ಎಲ್ಲಿ ಬೇಕಾದ್ರೂ ನೀವು ಇದನ್ನು ಅಳವಡಿಸಬಹುದು. ಇದಕ್ಕಾಗಿಯೇ ವಿಶೇಷ ಬಣ್ಣದ ಬಲ್ಬ್ ಗಳನ್ನು ಕೂಡ ನೀವು ಬಳಸಬಹುದು. ಫಿಲಿಪ್ಸ್ Hue ಮೋಶನ್ ಸೆನ್ಸಾರ್ ಗೆ AAA ಬ್ಯಾಟರಿ ಬ್ಯಾಕಪ್ ಇದ್ದು, 3 ವರ್ಷಗಳವರೆಗೆ ಕಾರ್ಯ ನಿರ್ವಹಿಸಬಲ್ಲದು. ಲೈಟ್ ಆನ್ ಅಥವಾ ಆಫ್ ಮಾಡಲು ನೀವು ಟೈಮ್ ಕೂಡ ಸೆಟ್ ಮಾಡಬಹುದು. ಡೇ ಟೈಮ್ ಹಾಗೂ ನೈಟ್ ಟೈಮ್ ಡಿಟೆಕ್ಷನ್ ಕೂಡ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...