alex Certify
ಕನ್ನಡ ದುನಿಯಾ       Mobile App
       

Kannada Duniya

2 ದಿನ ವಾಹನ ಸವಾರರಿಗೆ ತಟ್ಟಲಿದೆ ಬಿಸಿ

petrol-13-oct

ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಪೆಟ್ರೋಲಿಯಂ ಡೀಲರ್ ಗಳು 2 ದಿನ ಮುಷ್ಕರ ಕೈಗೊಂಡಿದ್ದಾರೆ.

ಕಮೀಷನ್ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ, ಅಕ್ಟೋಬರ್ 19 ಮತ್ತು 26 ರಂದು ಪೆಟ್ರೋಲಿಯಂ ಡೀಲರ್ ಗಳು ಮುಷ್ಕರ ನಡೆಸಲಿದ್ದಾರೆ. ಸರ್ಕಾರ ಕೇವಲ 4 ಪೈಸೆಯಷ್ಟು ಮಾತ್ರ ಕಮೀಷನ್ ಹೆಚ್ಚಳ ಮಾಡಿದೆ. ಇದರಿಂದಾಗಿ ಪೆಟ್ರೋಲಿಯಂ ಡೀಲರ್ ಗಳ ತೊಂದರೆ ಮುಂದುವರೆದಿದ್ದು, ಕೂಡಲೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಕಾರ್ಮಿಕರ ವೆಚ್ಛ, ಕಮೀಷನ್ ಹೆಚ್ಚಳ ಮೊದಲಾದ ಬೇಡಿಕೆಗಳ ಈಡೇರಿಕೆಗೆ ಅಪೂರ್ವಚಂದ್ರ ಸಮಿತಿ ವರದಿಯನ್ನು ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ಈ ಎಲ್ಲಾ ಬೇಡಿಕೆಗಳನ್ನಿಟ್ಟುಕೊಂಡು ಅಕ್ಟೋಬರ್ 19 ಮತ್ತು 26 ರಂದು ಮುಷ್ಕರ ಕೈಗೊಳ್ಳಲಾಗಿದೆ. ಎರಡೂ ದಿನಗಳಂದು ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಪೆಟ್ರೋಲ್ ಬಂಕ್ ಗಳು ಬಂದ್ ಆಗಲಿದ್ದು, ವಾಹನ ಸವಾರರಿಗೆ ಬಿಸಿ ತಟ್ಟಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...