alex Certify
ಕನ್ನಡ ದುನಿಯಾ       Mobile App
       

Kannada Duniya

3 ವರ್ಷದಲ್ಲೇ ಗರಿಷ್ಠ ಮಟ್ಟಕ್ಕೇರಿದ ಪೆಟ್ರೋಲ್ ದರ

ನವದೆಹಲಿ: ದೈನಂದಿನ ಬೆಲೆ ಪರಿಷ್ಕರಣೆ ಜಾರಿಯಾದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುತ್ತಿದ್ದರೂ ಗ್ರಾಹಕರ ಗಮನಕ್ಕೆ ಬರುತ್ತಿಲ್ಲ.

ಹಿಂದೆಲ್ಲಾ ತೈಲ ಕಂಪನಿಗಳು ಪ್ರತಿ 15 ದಿನಗಳಿಗೊಮ್ಮೆ ತೈಲ ಬೆಲೆಯನ್ನು ಪರಿಷ್ಕರಿಸುತ್ತಿದ್ದವು. ರೂಪಾಯಿ ಲೆಕ್ಕದಲ್ಲಿ ಏರಿಳಿತವಾಗುತ್ತಿದ್ದ ಕಾರಣ ಗ್ರಾಹಕರ ಗಮನಕ್ಕೆ ಬರುತ್ತಿತ್ತು.

ಕಳೆದ ಜುಲೈನಲ್ಲಿ ದೈನಂದಿನ ಬೆಲೆ ಪರಿಷ್ಕರಣೆ ಜಾರಿಗೆ ಬಂದಿದೆ. ಪೈಸೆಗಳ ಲೆಕ್ಕದಲ್ಲಿ ಬೆಲೆ ಏರಿಳಿತ ಕಾಣುತ್ತಿರುವುದರಿಂದ ಗ್ರಾಹಕರ ಗಮನ ಹರಿಸುವುದೇ ಇಲ್ಲ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿರುವುದರಿಂದ ದೇಶೀಯವಾಗಿಯೂ ತೈಲ ಬೆಲೆ ಹೆಚ್ಚಾಗಿದೆ. ಕಳೆದ ವಾರದಿಂದ ಈಚೆಗೆ ಬ್ಯಾರಲ್ 3.50 ಡಾಲರ್ ಏರಿಕೆ ಆಗಿದೆ.

ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಕಳೆದ 3 ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್ ಲೀಟರ್ 79.48 ರೂ. ಆಗಿದೆ. ಇದು ಕಳೆದ 3 ವರ್ಷಗಳಲ್ಲಿಯೇ ಅತಿ ಹೆಚ್ಚಿನ ಬೆಲೆಯಾಗಿದೆ.

ಪ್ರಾದೇಶಿಕವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಿರುತ್ತದೆ. ಇಂದಿನ ಪೆಟ್ರೋಲ್ ದರ 72.11 ರೂ. ಡೀಸೆಲ್ ದರ 59.36 ರೂ. ಆಗಿದೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...