alex Certify
ಕನ್ನಡ ದುನಿಯಾ       Mobile App
       

Kannada Duniya

ಜೂನ್ 16 ರಂದು ಸಿಗಲ್ಲ ಪೆಟ್ರೋಲ್, ಡೀಸೆಲ್

bunk-pe

ಬೆಂಗಳೂರು: ಪೆಟ್ರೋಲ್, ಡೀಸೆಲ್ ಕುರಿತಂತೆ ವಾಹನ ಮಾಲೀಕರಿಗೆ ಮಾಹಿತಿಯೊಂದು ಇಲ್ಲಿದೆ. ರಾಜ್ಯ ಫೆಡರೇಷನ್ ಆಫ್ ಪೆಟ್ರೋಲಿಯಂ ಡೀಲರ್ಸ್ ವತಿಯಿಂದ ಜೂನ್ 16 ರಂದು ರಾಜ್ಯದಲ್ಲಿ ಪೆಟ್ರೋಲ್ ಬಂಕ್ ಗಳನ್ನು ಬಂದ್ ಮಾಡಲಾಗುವುದು.

ಪ್ರತಿದಿನ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಪರಿಷ್ಕರಣೆ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ಬಂದ್ ಗೆ ಕರೆ ನೀಡಲಾಗಿದೆ.

ಜೂನ್ 15 ರಂದು ರಾತ್ರಿಯಿಂದಲೇ ಪೆಟ್ರೋಲ್, ಡೀಸೆಲ್ ಸಿಗುವುದಿಲ್ಲ. ಜೂನ್ 16 ರಂದು ಸಂಪೂರ್ಣ ಬಂದ್ ಮಾಡಲಾಗುವುದು. ನಿತ್ಯವೂ ದರ ಪರಿಷ್ಕರಣೆ ಮಾಡಲು ಬಂಕ್ ಮಾಲೀಕರಿಗೆ ತೊಂದರೆಯಾಗುತ್ತದೆ.

ಪ್ರತಿದಿನ ರಾತ್ರಿ 12 ಗಂಟೆಗೆ ಮೀಟರ್ ನಲ್ಲಿ ದರ ಬದಲಿಸಬೇಕು. ಬೆಳಿಗ್ಗೆ 6 ಗಂಟೆಗೆ ಪರಿಷ್ಕೃತ ದರದ ಫೋಟೋ ತೆಗೆದು ವಾಟ್ಸಾಪ್ ನಲ್ಲಿ ಕಂಪನಿಗೆ ಕಳಿಸಬೇಕು.

ಈ ಕ್ರಮವನ್ನು ವಿರೋಧಿಸಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪೆಟ್ರೋಲಿಯಂ ಡೀಲರ್ಸ್ ಜೂನ್ 16 ರಂದು ರಾಜ್ಯದಲ್ಲಿ ಪೆಟ್ರೋಲ್ ಬಂಕ್ ಗಳನ್ನು ಬಂದ್ ಮಾಡಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...