alex Certify
ಕನ್ನಡ ದುನಿಯಾ       Mobile App
       

Kannada Duniya

ಪೆಟ್ರೋಲ್ ಬಂಕ್ ಗಳಲ್ಲಿ ನೂಕುನುಗ್ಗಲು

bunk

ಬೆಂಗಳೂರು: 500 ರೂ. ಹಾಗೂ 1000 ರೂ. ಮುಖ ಬೆಲೆಯ ನೋಟುಗಳ ಚಲಾವಣೆ ರದ್ದು ಮಾಡಿದ ಹಿನ್ನಲೆಯಲ್ಲಿ ಜನ ರಾತ್ರೋ ರಾತ್ರಿ ಎ.ಟಿ.ಎಂ. ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ.

ಇಂದು ಬ್ಯಾಂಕ್, ಪೋಸ್ಟ್ ಆಫೀಸ್, ಎ.ಟಿ.ಎಂ. ಸೆಂಟರ್ ಗಳು ಕಾರ್ಯ ನಿರ್ವಹಿಸುವುದಿಲ್ಲವಾದ್ದರಿಂದ ರಾತ್ರಿಯೇ ಎ.ಟಿ.ಎಂ. ಸೆಂಟರ್ ಗಳಿಗೆ ಆಗಮಿಸಿದ ಜನ ಹಣವನ್ನು ಡಿಪಾಸಿಟ್, ಡ್ರಾ ಮಾಡಿದ್ದಾರೆ. ಇದರಿಂದಾಗಿ ದೇಶಾದ್ಯಂತ ಎ.ಟಿ.ಎಂ. ಸೆಂಟರ್ ಗಳಲ್ಲಿ ಜನಸಂದಣಿಯೇ ಕಂಡು ಬಂದಿದೆ. ಇನ್ನು ಪೆಟ್ರೋಲ್ ಬಂಕ್ ಗಳಲ್ಲಿಯೂ 500, 1000 ರೂ ಕೊಟ್ಟು ಜನ ಪೆಟ್ರೋಲ್, ಡೀಸೆಲ್ ಹಾಕಿಸಿಕೊಳ್ಳುತ್ತಿದ್ದಾರೆ.

ಅನೇಕ ಕಡೆಗಳಲ್ಲಿ ಪೆಟ್ರೋಲ್ ಬಂಕ್ ಗಳಲ್ಲಿ ನೂಕುನುಗ್ಗಲು ಉಂಟಾಗಿದೆ. ಗ್ರಾಹಕರು ಹೆಚ್ಚಾಗಿ 500 ರೂ., 1000 ರೂ. ನೋಟುಗಳನ್ನೇ ತಂದ ಕಾರಣ ಬಂಕ್ ಗಳಲ್ಲಿ ಚಿಲ್ಲರೆ ಸಮಸ್ಯೆ ಎದುರಾಗಿ ಕೆಲವೆಡೆ ಬಂಕ್ ಬಂದ್ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...