alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! 5 ವರ್ಷಗಳಲ್ಲೇ ಗರಿಷ್ಠ ದರ ದಾಖಲಿಸಿದ ಪೆಟ್ರೋಲ್ ಬೆಲೆ

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯ ಹಾದಿಯಲ್ಲಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ.

ಪೆಟ್ರೋಲ್ ಬೆಲೆ ಕಳೆದ 5 ವರ್ಷಗಳ ಗರಿಷ್ಠ ಮಟ್ಟವನ್ನು ದಾಖಲಿಸಿದ್ದು, ಡೀಸೆಲ್ ಬೆಲೆಯಲ್ಲಿಯೂ ಗಣನೀಯ ಏರಿಕೆಯಾಗಿದೆ. ದೆಹಲಿಯಲ್ಲಿ ಶುಕ್ರವಾರ ಪೆಟ್ರೋಲ್ ದರ ಲೀಟರ್ ಗೆ 74.08 ರೂ. ತಲುಪಿದೆ. ಮುಂಬೈನಲ್ಲಿ 81.93 ರೂ., ಕೋಲ್ಕತ್ತಾದಲ್ಲಿ 76.78 ರೂ., ಚೆನ್ನೈನಲ್ಲಿ 76.85 ರೂ. ಗೆ ಏರಿದೆ.

2014 ರ ಜುಲೈನಲ್ಲಿ ಚೆನ್ನೈನಲ್ಲಿ ಪೆಟ್ರೋಲ್ ದರ 76.93 ರೂ. ಇತ್ತು. 2014 ರ ಮಾರ್ಚ್ ನಲ್ಲಿ ಮುಂಬೈನಲ್ಲಿ ಪೆಟ್ರೋಲ್ ದರ 82.07 ರೂ., 2014 ರ ಆಗಸ್ಟ್ ನಲ್ಲಿ ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ 78.03 ರೂ. ಇತ್ತು.

ಡೀಸೆಲ್ ದರ ಲೀಟರ್ ಗೆ ದೆಹಲಿಯಲ್ಲಿ 65.31 ರೂ., ಮುಂಬೈನಲ್ಲಿ 69.54 ರೂ., ಕೋಲ್ಕತ್ತಾದಲ್ಲಿ 68.01 ರೂ., ಚೆನ್ನೈನಲ್ಲಿ 68.90 ರೂ. ಆಗಿದೆ. ತೈಲ ರಫ್ತು ರಾಷ್ಟ್ರಗಳ ಒಕ್ಕೂಟ ಉತ್ಪಾದನೆ ಕಡಿಮೆ ಮಾಡಿರುವುದೇ ಬೆಲೆ ಏರಿಕೆಗೆ ಪ್ರಮುಖವಾದ ಕಾರಣವಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವಂತೆ ಪೆಟ್ರೋಲಿಯಂ ಸಚಿವಾಲಯದಿಂದ ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಲಾಗಿದೆ. ಆದರೆ, ಈ ಬೇಡಿಕೆಗೆ ಹಣಕಾಸು ಇಲಾಖೆ ಸ್ಪಂದಿಸಿಲ್ಲ.

2017 ರ ಅಕ್ಟೋಬರ್ ನಲ್ಲಿ ಲೀಟರ್ ಗೆ 2 ರೂ. ಅಬಕಾರಿ ಸುಂಕ ಕಡಿಮೆ ಮಾಡಿದ್ದ ಕೇಂದ್ರ ಸರ್ಕಾರ, ತೆರಿಗೆ ಕಡಿತಕ್ಕೆ ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು. ಆದರೆ, ಒಂದೆರಡು ರಾಜ್ಯಗಳನ್ನು ಹೊರತುಪಡಿಸಿ, ಉಳಿದ ರಾಜ್ಯ ಸರ್ಕಾರಗಳು ತೆರಿಗೆ ಕಡಿಮೆ ಮಾಡಿಲ್ಲ. ಕೇಂದ್ರವೇ ಬೆಲೆ ಇಳಿಕೆಗೆ ಮುಂದಾಗಲಿ ಎನ್ನುವುದು ರಾಜ್ಯ ಸರ್ಕಾರಗಳ ಅಭಿಪ್ರಾಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...