alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಪ್ರತಿದಿನ ಬದಲಾಗುತ್ತೆ ಪೆಟ್ರೋಲ್ ಬೆಲೆ

petro

ನವದೆಹಲಿ: ಆಯ್ದ ನಗರಗಳಲ್ಲಿ ಜಾರಿಗೊಳಿಸಲಾಗಿದ್ದ ಪ್ರತಿದಿನ ಪೆಟ್ರೋಲ್ ಬೆಲೆ ಪರಿಷ್ಕರಣೆ ಪದ್ಧತಿಯನ್ನು ದೇಶಾದ್ಯಂತ ಜಾರಿಗೆ ತರಲಾಗುತ್ತಿದೆ.

ಜೂನ್ 16 ರಿಂದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದೇಶಾದ್ಯಂತ ಪ್ರತಿದಿನ ಪೆಟ್ರೋಲ್ ಬೆಲೆಯನ್ನು ಪರಿಷ್ಕರಿಸಲಿವೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾಗಿದ್ದು, ಪ್ರತಿ 15 ದಿನಗಳಿಗೊಮ್ಮೆ ತೈಲ ಬೆಲೆಯನ್ನು ಪರಿಷ್ಕರಿಸುತ್ತವೆ.

ಇದನ್ನು ಪ್ರತಿದಿನ ಪರಿಷ್ಕರಿಸುವ ಪದ್ಧತಿಯನ್ನು ಪ್ರಾಯೋಗಿಕವಾಗಿ ಪುದುಚೇರಿ, ವಿಶಾಖಪಟ್ಟಣ, ಉದಯಪುರ, ಜೆಮ್ ಶೆಡ್ ಪುರ ಹಾಗೂ ಚಂಡಿಗಢದಲ್ಲಿ ಜಾರಿಗೆ ತರಲಾಗಿತ್ತು.

ಜೂನ್ 16 ರಿಂದ ದೇಶಾದ್ಯಂತ ಪ್ರತಿದಿನ ಪೆಟ್ರೋಲ್ ಬೆಲೆಯನ್ನು ಪರಿಷ್ಕರಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮುಂದಾಗಿದೆ. ಆದರೆ, ಡೀಸೆಲ್ ದರವನ್ನು ಡೈಲಿ ಪರಿಷ್ಕರಿಸುವ ಕುರಿತಾಗಿ ಮಾಹಿತಿ ನೀಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...