alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ದಾಖಲೆ ಬರೆದ ಡೀಸೆಲ್ ಬೆಲೆ, ಪೆಟ್ರೋಲ್ ಬೆಲೆಯೂ ಗಗನಕ್ಕೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಕಳೆದ 4 ವರ್ಷಗಳಲ್ಲಿಯೇ ಅತಿ ಹೆಚ್ಚಿನ ಬೆಲೆ ತಲುಪಿದ್ದು, ಡೀಸೆಲ್ ಬೆಲೆ ಹೊಸ ದಾಖಲೆ ಬರೆದಿದೆ.

ದೆಹಲಿಯಲ್ಲಿ ಪೆಟ್ರೋಲ್ ಲೀಟರ್ ಗೆ 73.73 ರೂ. ತಲುಪಿದೆ. ಡೀಸೆಲ್ ಬೆಲೆ ಸಾರ್ವಕಾಲಿಕ ದಾಖಲೆ ಬರೆದಿದ್ದು, 64.58 ರೂ. ತಲುಪಿದೆ. ಭಾನುವಾರ 18 ಪೈಸೆ ಏರಿಕೆಯಾಗುವುದರೊಂದಿಗೆ ಪೆಟ್ರೋಲ್ ಬೆಲೆ 73.73 ರೂ. ತಲುಪಿದೆ. 2014 ರ ಸೆಪ್ಟಂಬರ್ 14 ರಂದು ಪೆಟ್ರೋಲ್ ಲೀಟರ್ ಗೆ 76.06 ರೂ. ಆಗಿತ್ತು. ನಂತರದಲ್ಲಿ ಇದಕ್ಕಿಂತ ಕಡಿಮೆ ಬೆಲೆ ಇತ್ತಾದರೂ, ಇಷ್ಟೊಂದು ದುಬಾರಿ ಆಗಿರಲಿಲ್ಲ. ಭಾನುವಾರ 73.73 ರೂ. ತಲುಪುವುದರೊಂದಿಗೆ ಪೆಟ್ರೋಲ್ ಬೆಲೆ 4 ವರ್ಷಗಳಲ್ಲಿನ ಹೆಚ್ಚಿನ ಬೆಲೆಯನ್ನು ದಾಖಲಿಸಿದೆ.

ಅದೇ ರೀತಿ ಡೀಸೆಲ್ ಬೆಲೆ ಲೀಟರ್ ಗೆ 64.22 ರೂ. ತಲುಪಿದ್ದು ಇದುವರೆಗಿನ ದಾಖಲೆಯಾಗಿತ್ತು. ಈಗ ಲೀಟರ್ 64.58 ರೂ. ತಲುಪುವುದರೊಂದಿಗೆ ಹೊಸ ದಾಖಲೆ ಬರೆದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಳಿತವಾದಂತೆ ದೇಶೀಯ ಮಾರುಕಟ್ಟೆಯಲ್ಲಿ ತೈಲ ಕಂಪನಿಗಳು ಬೆಲೆ ಏರಿಳಿತ ಮಾಡುತ್ತವೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾದಾಗಲು ದೇಶಿಯವಾಗಿ ಬೆಲೆ ಇಳಿಕೆಯ ಲಾಭ ಗ್ರಾಹಕರಿಗೆ ಸಿಕ್ಕಿರಲಿಲ್ಲ. ಅರುಣ್ ಜೇಟ್ಲಿ ಕೇಂದ್ರ ಹಣಕಾಸು ಸಚಿವರಾದ ಬಳಿಕ ಬರೋಬ್ಬರಿ 9 ಸಲ ಅಬಕಾರಿ ಸುಂಕ ಏರಿಕೆ ಮಾಡಲಾಗಿದೆ.

ಭಾರೀ ಆಕ್ರೋಶ ವ್ಯಕ್ತವಾದ ಬಳಿಕ, ಲೀಟರ್ ಪೆಟ್ರೋಲ್ ಗೆ 2 ರೂ. ಅಬಕಾರಿ ಸುಂಕ ಕಡಿಮೆ ಮಾಡಿ, ವ್ಯಾಟ್ ಇಳಿಕೆ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಲಾಗಿತ್ತು.

ಆದರೆ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಹೊರತುಪಡಿಸಿ, ಉಳಿದ ರಾಜ್ಯಗಳು ವ್ಯಾಟ್ ಇಳಿಕೆ ಮಾಡಲಿಲ್ಲ. ಕೇಂದ್ರವೇ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಕ್ರಮಕೈಗೊಳ್ಳಲಿ ಎಂದು ಅನೇಕ ರಾಜ್ಯಗಳು ಹೇಳಿವೆ.

ಇವೆಲ್ಲವುಗಳ ನಡುವೆ ಗ್ರಾಹಕರು ಹೈರಾಣಾಗಿದ್ದಾರೆ. ಭಾನುವಾರ ಡೀಸೆಲ್ ಬೆಲೆ ದಾಖಲೆ ಬರೆದಿದ್ದರೆ, ಪೆಟ್ರೋಲ್ ಬೆಲೆ ಕೂಡ ಗಗನಕ್ಕೇರಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...