alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ನ್ಯೂಸ್! ಭಾರೀ ದುಬಾರಿಯಾಯ್ತು ಡೀಸೆಲ್, ಪೆಟ್ರೋಲ್

ನವದೆಹಲಿ: ವಿವಿಧ ಕಾರಣಗಳಿಂದ ಏರುಗತಿಯಲ್ಲಿ ಸಾಗುತ್ತಾ ದಾಖಲೆ ಬರೆಯುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ.

ಬಿ.ಜೆ.ಪಿ. ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಈ ಅವಧಿಯಲ್ಲಿ ಪೆಟ್ರೋಲ್ ಬೆಲೆ ಅತಿ ಹೆಚ್ಚು ದರ ದಾಖಲಿಸಿದೆ. ಡೀಸೆಲ್ ಬೆಲೆ ಕೂಡ ದಾಖಲೆ ಬರೆದಿದೆ. ಭಾನುವಾರ ದೆಹಲಿಯಲ್ಲಿ ಪೆಟ್ರೋಲ್ ಲೀಟರ್ ಗೆ 74.40 ರೂ., ತಲುಪಿದೆ. ಡೀಸೆಲ್ ಬೆಲೆ ಕೂಡ ದಾಖಲೆ ಬರೆದಿದ್ದು, ಲೀಟರ್ ಗೆ 65.65 ರೂ. ತಲುಪಿದೆ. ಗ್ರಾಹಕರ ಮೇಲಿನ ಹೊರೆ ತಗ್ಗಿಸಲು ಅಬಕಾರಿ ಸುಂಕವನ್ನು ಕಡಿತಗೊಳಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಭಾನುವಾರ ಸರ್ಕಾರಿ ಸ್ವಾಮ್ಯದ ತೈಲಕಂಪನಿಗಳು ತೈಲ ಬೆಲೆಯನ್ನು ಪರಿಷ್ಕರಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್ ಗೆ 19 ಪೈಸೆಯಷ್ಟು ಏರಿಕೆ ಮಾಡಿವೆ. ಇದರೊಂದಿಗೆ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ದಾಖಲೆ ಬರೆದಿವೆ.

2013 ರ ಸೆಪ್ಟಂಬರ್ 14 ರಂದು ದೆಹಲಿಯಲ್ಲಿ ಪೆಟ್ರೋಲ್ 76.06 ರೂ. ಇದ್ದು, ಇದಾದ ಬಳಿಕ ಇಂದಿನ ದರ ಅತಿ ಹೆಚ್ಚಿನ ದರವಾಗಿದೆ.(ಇಂದಿನ ದರ 74.40 ರೂ.) ಡೀಸೆಲ್ ಬೆಲೆ 65.65 ರೂ. ತಲುಪಿದೆ. ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿಯೇ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ದುಬಾರಿಯಾಗಿದ್ದು, ಬೆಲೆ ಗರಿಷ್ಠ ಮಟ್ಟವನ್ನು ತಲುಪಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...