alex Certify
ಕನ್ನಡ ದುನಿಯಾ       Mobile App
       

Kannada Duniya

ಪೆಟ್ರೋಲ್ ಬೆಲೆ: ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್…!

ನವದೆಹಲಿ: ಗಗನಕ್ಕೇರಿರುವ ಪೆಟ್ರೋಲ್, ಡೀಸೆಲ್ ಬೆಲೆ ಸದ್ಯಕ್ಕೆ ಇಳಿಕೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಭಾರೀ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿಯೂ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗಿದೆ.

ಇದೇ ವೇಳೆ ತೈಲದ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಬೇಕೆಂದು ಪೆಟ್ರೋಲಿಯಂ ಸಚಿವಾಲಯದಿಂದ ಹಣಕಾಸು ಸಚಿವಾಲಯಕ್ಕೆ ಮನವಿ ಮಾಡಲಾಗಿದೆ. ಆದರೆ, 9 ಸಲ ಅಬಕಾರಿ ಸುಂಕ ಹೆಚ್ಚಿಸಿ 1 ಸಲ ಕಡಿತ ಮಾಡಿದ್ದ ಕೇಂದ್ರ, ರಾಜ್ಯಗಳೇ ವ್ಯಾಟ್ ಇಳಿಸಿ ಗ್ರಾಹಕರಿಗೆ ಹೊರೆ ಕಡಿಮೆ ಮಾಡಲಿ ಎಂದು ಹೇಳಿದೆ.

ಇದಕ್ಕೆ ರಾಜ್ಯಗಳಿಂದ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇದೇ ವೇಳೆ ಪೆಟ್ರೋಲ್ ದರ ಲೀಟರ್ ಗೆ 75 ರೂ., ಡೀಸೆಲ್ ದರ 65 ರೂ. ಗಡಿ ದಾಟಿದೆ. ಅಬಕಾರಿ ಸುಂಕ ಇಳಿಕೆಗೆ ಭಾರೀ ಒತ್ತಾಯ ಕೇಳಿ ಬಂದಿದೆ.

ಆದರೆ, ಅಬಕಾರಿ ಸುಂಕ ಕಡಿತ ಮಾಡಲು ಹಣಕಾಸು ಇಲಾಖೆ ನಿರಾಕರಿಸಿದೆ. ಅಬಕಾರಿ ಸುಂಕವನ್ನು 1 ಅಥವಾ 2 ರೂ. ಕಡಿಮೆ ಮಾಡಿದಲ್ಲಿ ಗ್ರಾಹಕರಿಗೆ 1 ಅಥವಾ 2 ರೂ. ಕಡಿಮೆಯಾಗುತ್ತದೆ. 1 ರೂ. ಕಡಿಮೆ ಮಾಡಿದಲ್ಲಿ ಕೇಂದ್ರಕ್ಕೆ 13,000 ಕೋಟಿ ರೂ. ಹೊರೆಯಾಗಲಿದೆ.

ವಿತ್ತೀಯ ಕೊರತೆ ನಿಯಂತ್ರಿಸಲು ಬಜೆಟ್ ಗುರಿಯನ್ನು ಮುಟ್ಟಬೇಕಿದ್ದರೆ, ಅಬಕಾರಿ ಸುಂಕವನ್ನು ಕಡಿಮೆ ಮಾಡದಿರುವುದು ಒಳ್ಳೆಯದು. ಒಂದು ವೇಳೆ 1 ರೂ. ಕಡಿಮೆ ಮಾಡಿದ್ರೂ 13,000 ಕೋಟಿ ರೂ. ನಷ್ಟವಾಗುತ್ತೆ ಎನ್ನುವುದು ಹಣಕಾಸು ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಎಕ್ಸೈಸ್ ಸುಂಕ ಕಡಿಮೆ ಮಾಡಿದಲ್ಲಿ ಆರ್ಥಿಕ ಕೊರತೆ ಎದುರಾಗುವ ಕಾರಣ ರಾಜ್ಯಗಳೇ ವ್ಯಾಟ್ ಇಳಿಕೆ ಮಾಡಲಿ ಎಂದು ಹಣಕಾಸು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ವಾಹನ ಸವಾರರು ಹೈರಾಣಾಗಿದ್ದಾರೆ. ಸದ್ಯಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗುವ ಲಕ್ಷಣ ಕಾಣುತ್ತಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...