alex Certify ಇಂಧನ ದರ ಇಳಿಕೆ: ವಾಹನ ಸವಾರರಿಗೆ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಧನ ದರ ಇಳಿಕೆ: ವಾಹನ ಸವಾರರಿಗೆ ಗುಡ್ ನ್ಯೂಸ್

ನವದೆಹಲಿ: ದೇಶದ ಮಹಾನಗರಗಳಲ್ಲಿ ಡೀಸೆಲ್ ದರದಲ್ಲಿ ಇಳಿಕೆಯಾಗಿದೆ. ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಡೀಸೆಲ್ ದರ ಪರಿಷ್ಕರಣೆಯಾಗಿದ್ದು, ದರ ಇಳಿಕೆಯಾಗಿದೆ. ದೇಶದ ರಾಜಧಾನಿ ನವದೆಹಲಿಯಲ್ಲಿ ಡೀಸೆಲ್ ಲೀಟರ್ ಗೆ 30 ಪೈಸೆ ಇಳಿಕೆಯಾಗಿದ್ದು 70.80 ರೂ. ದರ ಇದೆ. ಪೆಟ್ರೋಲ್ ಲೀಟರ್ ಗೆ 81.06 ರೂಪಾಯಿ ಇದೆ.

ಅದೇ ರೀತಿ ಬೆಂಗಳೂರಿನಲ್ಲಿ ಡೀಸೆಲ್ ದರ 41 ಪೈಸೆಯಷ್ಟು ಕಡಿಮೆಯಾಗಿದ್ದು 74.89 ರೂಪಾಯಿ ಇದೆ. ಪೆಟ್ರೋಲ್ 83.69 ರೂ. ದರ ಇದೆ.

ಮುಂಬೈನಲ್ಲಿ ಡೀಸೆಲ್ ಬೆಲೆ ಲೀಟರ್ ಗೆ 21 ಪೈಸೆಯಷ್ಟು ಇಳಿಕೆಯಾಗಿದ್ದು 77.12 ರೂ. ಇದೆ. ಪೆಟ್ರೋಲ್ ಲೀಟರ್ ಗೆ 87.74 ರೂ. ಇದೆ.

ಚೆನ್ನೈನಲ್ಲಿ ಡೀಸೆಲ್ ದರ ಲೀಟರ್ ಗೆ 36 ಪೈಸೆಯಷ್ಟು ಕಡಿಮೆಯಾಗಿದ್ದು ಲೀಟರ್ ಗೆ 76.19 ರೂ. ದರ ಇದೆ. ಪೆಟ್ರೋಲ್ ದರ ಲೀಟರ್ ಗೆ 84.14 ರೂ. ದರ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...