alex Certify
ಕನ್ನಡ ದುನಿಯಾ       Mobile App
       

Kannada Duniya

ಸತತ 2 ನೇ ದಿನವೂ ಇಳಿಕೆಯಾಗಿದೆ ಪೆಟ್ರೋಲ್-ಡೀಸೆಲ್ ದರ, ಇಂದು ಇಳಿಕೆಯಾಗಿರುವುದೆಷ್ಟು ಗೊತ್ತಾ?

ಕರ್ನಾಟಕ ವಿಧಾನಸಭಾ ಚುನಾವಣೆಯ ಬಳಿಕ ಕಳೆದ 15 ದಿನಗಳಿಂದ ಏರಿಕೆಯಾಗುತ್ತಲೇ ಸಾಗಿದ್ದ ಪೆಟ್ರೋಲ್-ಡೀಸೆಲ್ ದರ ಹದಿನಾರನೇ ದಿನ ಇಳಿಕೆ ಕಂಡಿತ್ತು. ಆದರೆ ಈ ಇಳಿಕೆ ಕೇವಲ ಒಂದು ಪೈಸೆ ಎಂಬುದು ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಇಂದು ಕೂಡ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಇಳಿಕೆಯಾಗಿದ್ದು, ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 7 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರಿಗೆ 5 ಪೈಸೆ ಕಡಿಮೆಯಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ 78.42 ರೂ. ಗಳಿಂದ 78.35 ರೂ. ಗಳಿಗೆ ತಲುಪಿದೆ. ಹಾಗೆಯೇ ಡೀಸೆಲ್ ದರ 69.30 ರೂ.ಗಳಿಂದ 69.25 ರೂ. ಆಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...