alex Certify
ಕನ್ನಡ ದುನಿಯಾ       Mobile App
       

Kannada Duniya

ಶನಿವಾರವೂ ವಾಹನ ಮಾಲೀಕರಿಗೆ ತಟ್ಟಿದೆ ಪೆಟ್ರೋಲ್ ಬೆಲೆ ಏರಿಕೆ ಬಿಸಿ

ನವದೆಹಲಿ: ದೇಶದ ಮೆಟ್ರೋ ನಗರಗಳಲ್ಲಿ ಪೆಟ್ರೋಲ್ ದರ ಶನಿವಾರ ಮತ್ತೆ ಏರಿಕೆ ಕಂಡಿದ್ದು, ಪ್ರತಿ ಲೀಟರ್ ಗೆ 90 ರೂಪಾಯಿಯತ್ತ ಸಾಗುವ ಲಕ್ಷಣ ಗೋಚರಿಸಿದೆ.

ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ ಶುಕ್ರವಾರ 82.32 ರೂ. ಇದ್ದಿದ್ದು, 82.44 ರೂ. ಗಳಿಗೆ ಏರಿಕೆಯಾಗಿದೆ. ಮುಂಬೈನಲ್ಲಿ ಅತಿ ಹೆಚ್ಚು ವ್ಯಾಟ್ ಕಾರಣ ಪ್ರತಿ ಲೀಟರ್ ಬೆಲೆ 89.80 ರೂ.ಗೆ ಮಾರಾಟವಾಗುತ್ತಿದೆ.

ಈ ನಡುವೆ ಡೀಸೆಲ್ ಬೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಯಾವುದೇ ಬದಲಾವಣೆಯಾಗಿಲ್ಲ. ದೆಹಲಿ, ಕೊಲ್ಕೊತ್ತಾ, ಮುಂಬೈ ಮತು ಚೆನ್ನೈಗಳಲ್ಲಿ ಡೀಸೆಲ್ ಬೆಲೆ ಕ್ರಮವಾಗಿ 73.87, 75.72, 78.42, 78.10 ರೂ. ಆಗಿದೆ.

ಕಳೆದ ಕೆಲವು ವಾರಗಳಿಂದ ಇಂಧನ ಬೆಲೆ ಹೆಚ್ಚಾಗಲು ಅಂತರಾಷ್ಟ್ರೀಯ ಮಟ್ಟದಲ್ಲಿನ ವಿದ್ಯಾಮಾನಗಳು ಕಾರಣ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ ಹೇಳಿದ್ದಾರೆ. ಇದೇ ವೇಳೆ ಜನರ ಮೇಲಿನ ಹೊರೆ ತಗ್ಗಿಸಲು ಪಶ್ಚಿಮ ಬಂಗಾಳ, ಕರ್ನಾಟಕ, ಆಂಧ್ರ, ರಾಜಸ್ತಾನ ಸೇರಿ ವಿವಿಧ ರಾಜ್ಯಗಳು ತೆರಿಗೆಯನ್ನು ಕಡಿತಗೊಳಿಸಿದ್ದವು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...