alex Certify
ಕನ್ನಡ ದುನಿಯಾ       Mobile App
       

Kannada Duniya

ಮಧ್ಯಮ ವರ್ಗದವರ ನಿದ್ರೆಗೆಡಿಸುತ್ತಿದೆ ಪೆಟ್ರೋಲ್-ಡಿಸೇಲ್ ಬೆಲೆ

ಕರ್ನಾಟಕ ಚುನಾವಣೆ ನಂತ್ರ ಸತತ 8 ದಿನಗಳಿಂದ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಏರಿಕೆ ಕಾಣ್ತಿದೆ. ಸೋಮವಾರ ತೈಲ ಬೆಲೆಯಲ್ಲಿ ದಾಖಲೆ ಪ್ರಮಾಣದ ಏರಿಕೆ ಕಂಡಿದೆ. ಸೋಮವಾರ ಪೆಟ್ರೋಲ್ ಪ್ರತಿ ಲೀಟರ್ ಗೆ 33 ಪೈಸೆ ಹಾಗೂ ಡಿಸೇಲ್ ಬೆಲೆ 25 ಪೈಸೆ ಏರಿಕೆಯಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ 76.57 ರೂಪಾಯಿ ತಲುಪಿದ್ರೆ ಡಿಸೇಲ್ ಬೆಲೆ 67.82 ಕ್ಕೆ ಬಂದು ನಿಂತಿದೆ. ಭಾನುವಾರ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತೈಲ ಬೆಲೆ ಏರಿಕೆಯಿಂದ ಸಾಕಷ್ಟು ಸಮಸ್ಯೆ ಎದುರಾಗ್ತಿದೆ. ಮಧ್ಯಮ ವರ್ಗದವರ ಸಂಕಷ್ಟದ ಅರಿವಿದೆ. ಸರ್ಕಾರ ತೈಲ ಬೆಲೆ ಇಳಿಕೆಗೆ ಪ್ರಯತ್ನ ನಡೆಸುತ್ತಿದೆ ಎಂದಿದ್ದರು. ಸಚಿವರ ಭರವಸೆ ಬೆನ್ನಲ್ಲೇ ಮತ್ತೆ ತೈಲ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ.

ಕರ್ನಾಟ ಚುನಾವಣೆ ನಂತ್ರ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಏರಿಕೆ ಕಾಣ್ತಿದೆ. ಈ ಮಧ್ಯೆ ಎಕ್ಸೈಸ್ ಸುಂಕವನ್ನು ಕಡಿತಗೊಳಿಸುವುದಿಲ್ಲವೆಂದು ಸರ್ಕಾರ ಹೇಳಿದೆ. ಭಾನುವಾರ ಧರ್ಮೇಂದ್ರ ಪ್ರಧಾನ್ ಕೂಡ ಇದೇ ಮಾತು ಹೇಳಿದ್ದಾರೆ. ಕಳೆದ ವರ್ಷ ಗುಜರಾತ್ ಚುನಾವಣೆ ವೇಳೆಯೂ ತೈಲ ಕಂಪನಿಗಳು ಪೆಟ್ರೋಲ್-ಡಿಸೇಲ್ ದರವನ್ನು ಇಳಿಸಿದ್ದವು. ಮತದಾನ ನಡೆದ ನಂತ್ರ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆಗೆ ಮುಂದಾಗಿದ್ದವು.

ಇನ್ನೂ ಎರಡು ವರ್ಷ ತೈಲ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. 2020ರ ಸುಮಾರಿಗೆ ಪ್ರತಿ ಬ್ಯಾರಲ್ ತೈಲ ಬೆಲೆ 90 ಡಾಲರ್ ತಲುಪುವ ಸಾಧ್ಯತೆಯಿದೆ. 2014ರಲ್ಲಿ ಪ್ರತಿ ಬ್ಯಾರಲ್ ಬೆಲೆ 90 ಡಾಲರ್ ತಲುಪಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...