alex Certify
ಕನ್ನಡ ದುನಿಯಾ       Mobile App
       

Kannada Duniya

ಆಯುಧ ಪೂಜೆ ದಿನವೇ ವಾಹನ ಸವಾರರಿಗೆ ಸಿಕ್ತು ಸಿಹಿ ಸುದ್ದಿ

ಪೆಟ್ರೋಲ್-ಡೀಸೆಲ್ ಬೆಲೆಯ ಸತತ ಏರಿಕೆಯಿಂದ ಕಂಗೆಟ್ಟಿದ್ದ ವಾಹನ ಸವಾರರಿಗೆ ನೆಮ್ಮದಿ ನೀಡುವ ಸಲುವಾಗಿ ಕೇಂದ್ರ ಸರ್ಕಾರ, ಕೆಲ ದಿನಗಳ ಹಿಂದೆ ಅಬಕಾರಿ ಸುಂಕ ಕಡಿಮೆ ಮಾಡುವ ಮೂಲಕ 2.50 ರೂ. ಇಳಿಕೆಯಾಗುವಂತೆ ಮಾಡಿತ್ತು.

ಅದಾದ ಬಳಿಕ ನಿರಂತರವಾಗಿ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ಬೆಲೆ ಇಳಿಕೆಯಾಗಿದ್ದ ಕೇವಲ 10 ದಿನಗಳಲ್ಲೇ ಮತ್ತೆ ಹಿಂದಿನ ಮಟ್ಟವನ್ನು ತಲುಪಿತ್ತು.

ಇದರಿಂದ ವಾಹನ ಸವಾರರು ಭ್ರಮನಿರಸನಗೊಂಡಿದ್ದರ ಮಧ್ಯೆ ಆಯುಧ ಪೂಜೆ ದಿನವಾದ ಇಂದು ಕೊಂಚ ನೆಮ್ಮದಿಯ ಸುದ್ದಿ ಸಿಕ್ಕಿದೆ. ಇಂದು ಪೆಟ್ರೋಲ್ ಬೆಲೆಯಲ್ಲಿ 21 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 11 ಪೈಸೆ ಇಳಿಕೆಯಾಗಿದ್ದು, ವಾಹನ ಸವಾರರಲ್ಲಿ ಮುಂದಿನ ದಿನಗಳ ಕುರಿತು ಸ್ವಲ್ಪ ಆಶಾಭಾವನೆ ಮೂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...