alex Certify
ಕನ್ನಡ ದುನಿಯಾ       Mobile App
       

Kannada Duniya

6 ದಿನಗಳಿಂದ ಬದಲಾಗಿಲ್ಲ ಪೆಟ್ರೋಲ್ -ಡೀಸೆಲ್ ಬೆಲೆ: ಕಾರಣ ಗೊತ್ತಾ…?

ಕಳೆದ ತಿಂಗಳಿಂದ ಏರುಗತಿಯಲ್ಲೇ ಸಾಗುತ್ತಿದ್ದ ಪೆಟ್ರೋಲ್, ಡೀಸೆಲ್ ಬೆಲೆ ದಾಖಲೆ ಮೇಲೆ ದಾಖಲೆಯನ್ನು ಬರೆದಿದೆ. ಕಚ್ಚಾ ತೈಲದ ಬೆಲೆ ಏರಿಕೆಯಾದ ಕಾರಣ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕೂಡ ಹೆಚ್ಚಳವಾಗಿ ಗ್ರಾಹಕರು ಹೈರಾಣಾಗಿದ್ದಾರೆ.

ಬೆಲೆ ಏರಿಕೆಯಾಗಿದ್ರೂ ಕೂಡ ಕಳೆದ 6 ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಪರಿಷ್ಕರಿಸಲಾಗಿಲ್ಲ. ದೈನಂದಿನ ಬೆಲೆ ಪರಿಷ್ಕರಣೆ ನೀತಿ ಜಾರಿಗೆ ಬಂದಾಗಿನಿಂದ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯನ್ನು ಪರಿಷ್ಕರಿಸಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಕಾರಣದಿಂದ ತೈಲ ಬೆಲೆಯನ್ನು 6 ದಿನಗಳಿಂದ ಬದಲಿಸಿಲ್ಲ ಎನ್ನಲಾಗಿದೆ.

ದೆಹಲಿಯಲ್ಲಿ ಇಂದು ಪೆಟ್ರೋಲ್ ಲೀಟರ್ ಗೆ 74.63 ರೂ., ಕೋಲ್ಕತ್ತಾದಲ್ಲಿ 77.32 ರೂ., ಮುಂಬೈನಲ್ಲಿ 82.48 ರೂ., ಚೆನ್ನೈನಲ್ಲಿ 77.43 ರೂ. ಆಗಿದೆ. ಏಪ್ರಿಲ್ 24 ರಿಂದ ಇದೇ ಬೆಲೆಗಳು ಜಾರಿಯಲ್ಲಿವೆ. ಕಚ್ಚಾ ತೈಲದ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ರೂ ಕೂಡ(ಬ್ಯಾರೆಲ್ ಗೆ 74.50 ಡಾಲರ್) 6 ದಿನಗಳಿಂದ ದೇಶೀಯ ಮಾರುಕಟ್ಟೆಯಲ್ಲಿ ತೈಲ ಕಂಪನಿಗಳು ಬೆಲೆಯನ್ನು ಪರಿಷ್ಕರಿಸಿಲ್ಲ.

ಸದ್ಯ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಬೆಲೆ ಪರಿಷ್ಕರಿಸದೇ ಯಥಾಸ್ಥಿತಿಯಲ್ಲಿ ಉಳಿಸಲಾಗಿದೆ. ಗುಜರಾತ್ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಇದೇ ರೀತಿ ಮಾಡಲಾಗಿತ್ತು. ಕರ್ನಾಟಕ ಚುನಾವಣೆ ಮುಗಿದ ಬಳಿಕ ಗ್ರಾಹಕರಿಗೆ ಬರೆ ಬೀಳುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...