alex Certify
ಕನ್ನಡ ದುನಿಯಾ       Mobile App
       

Kannada Duniya

ವಾಹನ ಸವಾರರಿಗೆ ಶಾಕ್ ! ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ

ಪೆಟ್ರೋಲ್, ಡೀಸೆಲ್ ಮತ್ತೆ ವಾಹನ ಸವಾರರ ಜೇಬು ಸುಡುತ್ತಿದೆ. 8 ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 80 ರೂಪಾಯಿಗೆ ಬಂದು ನಿಂತಿದೆ. ಮಾರ್ಚ್ ಮೊದಲ ವಾರದಲ್ಲಿ ಪೆಟ್ರೋಲ್ ಬೆಲೆಯಲ್ಲಿ 1 ರೂಪಾಯಿ ಏರಿಕೆಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದುಬಾರಿಯಾಗಿರುವುದು ಹಾಗೂ ಭಾರತದ ರೂಪಾಯಿ ಮೌಲ್ಯ ಕುಸಿದಿರುವುದು ಇದಕ್ಕೆ ಕಾರಣವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮಾರ್ಚ್ 9ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 72.43 ರೂಪಾಯಿಯಾಗಿದೆ. ಡೀಸೆಲ್ ಬೆಲೆ 62.88 ರೂಪಾಯಿಗೆ ಬಂದು ನಿಂತಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 73 ರೂಪಾಯಿ 57 ಪೈಸೆಯಾಗಿದೆ. ಮುಂಬೈನಲ್ಲಿ 80 ರೂಪಾಯಿ 30 ಪೈಸೆಯಾದ್ರೆ, ಚೆನ್ನೈನಲ್ಲಿ 75 ರೂಪಾಯಿ 12 ಪೈಸೆಯಾಗಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಮಾರ್ಚ್ 3 ರಿಂದ ಮಾರ್ಚ್ 9 ರೊಳಗೆ ಪ್ರತಿ ಬ್ಯಾರಲ್ ಗೆ 2 ಡಾಲರ್ ಏರಿಕೆಯಾಗಿದೆ. ವೆಚ್ಚ ಹೆಚ್ಚಾಗ್ತಿದ್ದಂತೆ ಕಂಪನಿಗಳು ಬೆಲೆಯಲ್ಲಿ ಏರಿಕೆ ಮಾಡಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...