alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಗಣನೀಯವಾಗಿ ಇಳಿಕೆಯಾಗಿದೆ ಪೆಟ್ರೋಲ್-ಡಿಸೇಲ್ ಬೆಲೆ

2018 ರ ಮೇ 30ರಿಂದ ಭಾರತದಲ್ಲಿ ತೈಲದರದಲ್ಲಿ ಭಾರೀ ವ್ಯತ್ಯಾಸಗಳಾಗ್ತಿದೆ. ಅದರಲ್ಲೂ ಪ್ರತಿ ಲೀಟರ್ ಗೆ 80 ರ ಗಡಿ ದಾಟಿದ್ದ ಪೆಟ್ರೋಲ್ ಬೆಲೆ ಗಣನೀಯವಾಗಿ ಇಳಿಮುಖವಾಗ್ತಿದೆ. ಮೇ 30 ರಿಂದ ಜೂನ್ 26 ರವರೆಗೆ ಆರು ಬಾರಿ ತೈಲದರಗಳನ್ನ ಕಡಿಮೆಯಾಗಿದೆ. ಕೋಲ್ಕತ್ತಾ ಮತ್ತು ದೆಹಲಿಯಲ್ಲಿ ಇಂದಿನ ಪೆಟ್ರೋಲ್ ಬೆಲೆಯಲ್ಲಿ 14 ಪೈಸೆ ಇಳಿಕೆಯಾಗಿದೆ.

ಮುಂಬೈ ಮತ್ತು ಚೆನ್ನೈನಲ್ಲಿ ಕೂಡ ಇಂದಿನ ಪೆಟ್ರೋಲ್ ಬೆಲೆಯಲ್ಲಿ 18 ರಿಂದ 15 ಪೈಸೆ ಇಳಿಕೆಯಾಗಿದೆ. ಮೆಟ್ರೋಪಾಲಿಟಿನ್ ಸಿಟಿಗಳಾದ ದೆಹಲಿ, ಕೋಲ್ಕತ್ತಾ , ಮುಂಬೈ ಮತ್ತು ಚೆನ್ನೈನಲ್ಲಿ ಇಂದಿನ ಪೆಟ್ರೋಲ್ ಬೆಲೆ ಕ್ರಮವಾಗಿ 75.55 ರೂಪಾಯಿ , 78.23 ರೂಪಾಯಿ, 83.12 ರೂಪಾಯಿ ಮತ್ತು 78.40 ರೂಪಾಯಿಗೆ ನಿಗದಿಯಾಗಿದೆ.

ಇದೇ ರೀತಿಯಲ್ಲಿ ಡೀಸೆಲ್ ದರದಲ್ಲಿ ಕೂಡ ಕೊಂಚ ಮಟ್ಟಿನ ಇಳಿಕೆಯಾಗಿದೆ. ದೆಹಲಿ , ಚೆನ್ನೈ, ಕೋಲ್ಕತ್ತಾದಲ್ಲಿ ಡೀಸೆಲ್ ದರದಲ್ಲಿ 10 ಪೈಸೆ ಮತ್ತು ಮುಂಬೈನ ಡೀಸೆಲ್ ದರದಲ್ಲಿ 12 ಪೈಸೆ ಇಳಿಕೆಯಾಗಿದೆ. ಜೂನ್ 26ರ ಮಂಗಳವಾರಕ್ಕೆ ಡೀಸೆಲ್ ದರಗಳು ದೆಹಲಿಯಲ್ಲಿ 67.38 ರೂಪಾಯಿ, ಕೋಲ್ಕತ್ತಾದಲ್ಲಿ 69.93 , ಮುಂಬೈನಲ್ಲಿ 71.52 , ಚೆನ್ನೈನಲ್ಲಿ 71.12ಕ್ಕೆ ನಿಗದಿಯಾಗಿದೆ. ಒಟ್ಟಾರೆಯಾಗಿ ಮೇ 30ರಿಂದ ಇಲ್ಲಿಯವರಗೂ ಮೆಟ್ರೋಲ್ ದರದಲ್ಲಿ 2 ರೂಪಾಯಿ 88 ಪೈಸೆಗೆ ಇಳಿಕೆಯಾಗಿದ್ರೆ ಡೀಸೆಲ್ ದರ 1 ರೂಪಾಯಿ 93 ಪೈಸೆಯಷ್ಟು ಕಡಿಮೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...