alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಮತ್ತೆ ಇಳಿಕೆ

ಕರ್ನಾಟಕ ವಿಧಾನಸಭಾ ಚುನಾವಣೆ ಬಳಿಕ ಸತತ 15 ದಿನಗಳ ಕಾಲ ಏರಿಕೆ ಕಾಣುವ ಮೂಲಕ ವಾಹನ ಸವಾರರಲ್ಲಿ ಆತಂಕ ಹುಟ್ಟಿಸಿದ್ದ ಪೆಟ್ರೋಲ್-ಡೀಸೆಲ್ ಬೆಲೆ ಆ ಬಳಿಕ ಕಡಿಮೆಯಾಗುತ್ತಾ ಬಂದಿತ್ತು.

ಇದರಿಂದ ನೆಮ್ಮದಿಗೊಂಡಿದ್ದ ವಾಹನ ಸವಾರರು ಮತ್ತಷ್ಟು ಇಳಿಕೆಯಾಗುವುದೆಂದು ನಿರೀಕ್ಷೆಯಲ್ಲಿದ್ದ ಮಧ್ಯೆ ಕಳೆದ ಕೆಲ ದಿನಗಳಿಂದ ಏರಿಕೆ ಅಥವಾ ಇಳಿಕೆ ಕಾಣದ ಪೆಟ್ರೋಲ್-ಡೀಸೆಲ್ ದರ ಸ್ಥಿರತೆ ಕಾಯ್ದುಕೊಂಡಿತ್ತು.

ಇಂದು ಮತ್ತೆ ಸಿಹಿ ಸುದ್ದಿ ಸಿಕ್ಕಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಈಗ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 76.16 ರೂ. ಗಳಾಗಿದ್ದು, ಡೀಸೆಲ್ ದರ 67.68 ರೂ. ಗಳಾಗಿದೆ.

ಮೇ 14 ರಿಂದ ಮೇ 29ರ ನಡುವಿನ ಅವಧಿಯಲ್ಲಿ ಪೆಟ್ರೋಲ್ ಬೆಲೆ 3.74 -4 ರೂ. ಗಳಷ್ಟು ಏರಿಕೆಯಾಗಿದ್ದು, ಡೀಸೆಲ್ ಬೆಲೆ 3.23-3.62 ರೂ. ಏರಿಕೆಯಾಗಿತ್ತು. ಆ ಬಳಿಕ ದರ ಇಳಿಕೆಯಾಗುತ್ತಿದ್ದು, ಇದುವರೆಗೆ ಪೆಟ್ರೋಲ್ ಬೆಲೆಯಲ್ಲಿ ಒಟ್ಟು1.53 ಇಳಿಕೆಯಾಗಿದ್ದರೆ, ಡೀಸೆಲ್ ಬೆಲೆಯಲ್ಲಿ1.52 ರೂ. ಕಡಿಮೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...