alex Certify
ಕನ್ನಡ ದುನಿಯಾ       Mobile App
       

Kannada Duniya

ಶೀಘ್ರದಲ್ಲೇ ಸಿಗಲಿದೆ ಸಿಹಿ ಸುದ್ದಿ: ಪ್ರತಿ ಲೀಟರ್ ಗೆ 4 ರೂ. ಕಡಿಮೆಯಾಗಲಿದೆ ಪೆಟ್ರೋಲ್-ಡಿಸೇಲ್ ಬೆಲೆ?

ಪೆಟ್ರೋಲ್ ಡಿಸೇಲ್ ಬೆಲೆಯಲ್ಲಿ ಗಣನೀಯ ಏರಿಕೆಯಾಗ್ತಿದೆ. 10ನೇ ದಿನವೂ ಪೆಟ್ರೋಲ್ ಡಿಸೇಲ್ ಬೆಲೆಯಲ್ಲಿ ಏರಿಕೆಯಾಗಿದೆ. ಕಳೆದ ಹತ್ತು ದಿನಗಳಲ್ಲಿ ಪೆಟ್ರೋಲ್ ಬೆಲೆ 2.51 ಪೈಸೆಯಿಂದೆ 2.68 ರೂಪಾಯಿಗೆ ಏರಿಕೆಯಾಗಿದೆ. ಡಿಸೇಲ್ ಪ್ರತಿ ಲೀಟರ್ ಗೆ 2.26 ಪೈಸೆಯಿಂದ 2.58 ಪೈಸೆಗೆ ಬಂದು ನಿಂತಿದೆ.

ಈ ಮಧ್ಯೆ ವಾಹನ ಸವಾರರಿಗೆ ಖುಷಿ ಸುದ್ದಿ ನೀಡಲು ಕೇಂದ್ರ ಸರ್ಕಾರ ತಯಾರಿ ನಡೆಸುತ್ತಿದೆ. ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸುವ ಮಹತ್ವದ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಸರ್ಕಾರ ಅಬಕಾರಿ ಸುಂಕವನ್ನು 2 ರೂಪಾಯಿಯಿಂದ 4 ರೂಪಾಯಿಗೆ ಇಳಿಸಲು ಮುಂದಾಗಿದೆ. ಇನ್ನೇರಡು ದಿನಗಳಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ.

ಬುಧವಾರ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತೈಲ ಕಂಪನಿ ಜೊತೆ ಮಾತುಕತೆ ನಡೆಸಲಿದ್ದಾರೆ. ಅಧಿಕಾರಿಗಳ ಪ್ರಕಾರ ಅಬಕಾರಿ ಸುಂಕವನ್ನು 1 ರೂಪಾಯಿ ಕಡಿತಗೊಳಿಸಿದ್ರೆ ಸರ್ಕಾರಕ್ಕೆ 130-140 ಅರಬ್ ರೂಪಾಯಿ ಹೊರೆ ಬೀಳಲಿದೆ. ಅದೇ 4 ರೂಪಾಯಿ ಇಳಿಕೆ ಮಾಡಿದಲ್ಲಿ 520 ರಿಂದ 560 ಅರಬ್ ರೂಪಾಯಿ ಹೊರೆ ಬೀಳಲಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...