alex Certify
ಕನ್ನಡ ದುನಿಯಾ       Mobile App
       

Kannada Duniya

ಹತ್ತೇ ದಿನದಲ್ಲಿ ಅಂತ್ಯವಾಯ್ತು ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ ಖುಷಿ

ನಿರಂತರವಾಗಿ ಏರಿಕೆ ಕಾಣುವ ಮೂಲಕ ವಾಹನ ಸವಾರರಿಗೆ ಆತಂಕ ಹುಟ್ಟಿಸಿದ್ದ ಪೆಟ್ರೋಲ್-ಡೀಸೆಲ್ ಬೆಲೆಯನ್ನು ಕೇಂದ್ರ ಸರ್ಕಾರ, 10 ದಿನಗಳ ಹಿಂದೆ ಅಬಕಾರಿ ಸುಂಕ ಕಡಿತ ಮಾಡುವ ಮೂಲಕ 2.50 ರೂ. ಗಳಷ್ಟು ಇಳಿಕೆ ಕಾಣುವಂತೆ ಮಾಡಿತ್ತು.

ಅದಾದ ಬಳಿಕ ಪ್ರತಿನಿತ್ಯವೂ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಸತತ ಏರಿಕೆ ಕಂಡಿದ್ದು, ಹತ್ತು ದಿನಗಳ ಬಳಿಕ ಮತ್ತೆ ಯಥಾಸ್ಥಿತಿಗೆ ಬಂದು ತಲುಪಿದೆ. ಅರ್ಥಾತ್ ಪೆಟ್ರೋಲ್-ಡೀಸೆಲ್ ಬೆಲೆ, ಈಗ ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತ ಮಾಡುವ ಮುನ್ನ ಇದ್ದ ದರಕ್ಕೆ ಬಂದಿದೆ.

ಬೆಲೆ ಇಳಿಕೆಯ ಖುಷಿ ವಾಹನ ಮಾಲೀಕರಿಗೆ ಕೇವಲ 10 ದಿನಗಳಷ್ಟೇ ಲಭಿಸಿದ್ದು, ಮುಂದಿನ ದಿನಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಮತ್ತೆ ಗಗನಮುಖಿಯಾಗಲಿದೆ ಎಂದು ಹೇಳಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...