alex Certify
ಕನ್ನಡ ದುನಿಯಾ       Mobile App
       

Kannada Duniya

2 ದಿನ ಪೆಟ್ರೋಲ್ ಖರೀದಿ ಮಾಡಲ್ಲ ವಿತರಕರು

petrole

ಬೆಂಗಳೂರು: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಪೆಟ್ರೋಲಿಯಂ ವಿತರಕರ ಸಂಘದಿಂದ ಮುಷ್ಕರ ಕೈಗೊಂಡಿದ್ದು, ನವೆಂಬರ್ 3, 4 ರಂದು ತೈಲ ಕಂಪನಿಗಳಿಂದ ಖರೀದಿ ನಿಲ್ಲಿಸಲಿದ್ದಾರೆ.

ಇದರಿಂದಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ರಾಜ್ಯ ಪೆಟ್ರೋಲಿಯಂ ಡೀಲರ್ಸ್ ಫೆಡರೇಷನ್ ನಿರ್ಧಾರದಂತೆ ಮೂರೂ ತೈಲ ಕಂಪನಿಗಳಿಂದ 2 ದಿನ ಖರೀದಿ ನಿಲ್ಲಿಸಲಾಗುವುದು. ಇದರಿಂದಾಗಿ ನವೆಂಬರ್ 4 ರಂದು ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಕಮಿಷನ್ ಹೆಚ್ಚಳ, ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆ ವೆಚ್ಛದಲ್ಲಿ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ಕೈಗೊಳ್ಳಲಾಗಿದೆ.

ನವೆಂಬರ್ 3, 4 ರಂದು ಪೆಟ್ರೋಲ್ ಬಂಕ್ ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದರೆ, ತೈಲ ಖರೀದಿ ನಿಲ್ಲಿಸುವುದರಿಂದ ಪೂರೈಕೆಯಲ್ಲಿ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...