alex Certify
ಕನ್ನಡ ದುನಿಯಾ       Mobile App
       

Kannada Duniya

‘ಹಬ್ಬ’ದ ದಿನ ನೆಮ್ಮದಿ ನೀಡಿದ ಪೆಟ್ರೋಲ್-ಡೀಸೆಲ್ ಬೆಲೆ

ನವದೆಹಲಿ: ಕಳೆದ 15 ದಿನಗಳಿಂದ ನಿರಂತರ ಏರುತ್ತಲೇ ಸಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಇದೇ ಮೊದಲ ಬಾರಿ ಬುಧವಾರದಂದು ಹಿಂದಿನ ದಿನದ ದರದಲ್ಲೇ ನಿಂತಿದೆ.

ಮಂಗಳವಾರದಂದು ಪೆಟ್ರೋಲ್ ದರ ರಾಜಧಾನಿ ನವದೆಹಲಿಯಲ್ಲಿ ಪ್ರತಿ ಲೀಟರ್ ಗೆ 80.87 ರೂ. ಇದ್ದರೆ, ವಾಣಿಜ್ಯ ನಗರಿ ಮುಂಬೈನಲ್ಲಿ 88.26 ರೂ. ಇತ್ತು. ಇದೇ ವೇಳೆ ಡೀಸೆಲ್ ದರ ದೆಹಲಿಯಲ್ಲಿ ಪ್ರತಿ ಲೀಟರ್ ಗೆ 72.97 ರೂ. ಮತ್ತು ಮುಂಬೈನಲ್ಲಿ 77.47 ರೂ. ಇತ್ತು.

ಬುಧವಾರವೂ ಅದೇ ದರ ಮುಂದುವರಿದಿರುವುದು ಗ್ರಾಹಕರು ಸದ್ಯ ಮತ್ತೆ ಏರಿಲ್ಲವಲ್ಲ ಎಂದು ಸಮಾಧಾನಪಟ್ಟುಕೊಳ್ಳುವಂತೆ ಮಾಡಿದೆ.

ರೂಪಾಯಿ ಮುಂದೆ ಡಾಲರ್ ನ ಪ್ರಾಬಲ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿರುವುದರಿಂದ ಮತ್ತು ಕೆಲವೊಂದು ಜಾಗತಿಕ ಕಾರಣಗಳಿಗಾಗಿ ದೇಶದಲ್ಲಿ ಪೆಟ್ರೋಲಿಯಂ ದರ ಹಿಡಿತಕ್ಕೆ ಸಿಗದೆ ಏರುತ್ತಲೇ ಸಾಗಿತ್ತು.

ಮಂಗಳವಾರವಂತೂ ರೂಪಾಯಿ ಇತಿಹಾಸದಸಲ್ಲೇ ಪಾತಾಳ ಕಂಡಿತ್ತು. ಈ ಬಗ್ಗೆ ಕೇಂದ್ರ ಸರ್ಕಾರವೂ ಕೈಚೆಲ್ಲಿ ನಿಸ್ಸಹಾಯಕವಾಗಿ ಕುಳಿತಿದೆ. ಮಾತ್ರವಲ್ಲ ತನ್ನ ಪಾಲಿನ ತೆರಿಗೆ ಕಡಿತಗೊಳಿಸುವುದು ಕಷ್ಟ ಸಾಧ್ಯ ಎಂದು ತಿಳಿಸಿದೆ.

ಇದೇ ವೇಳೆ ರಾಜಸ್ಥಾನ, ಪಶ್ಚಿಮ ಬಂಗಾಳ ಮತ್ತು ಆಂಧ್ರ ಪ್ರದೇಶ ರಾಜ್ಯ ಸರ್ಕಾರಗಳು ತಮ್ಮ ಪಾಲಿನ ಸೆಸ್ ಅನ್ನು ಕೊಂಚ ಕಡಿಮೆಗೊಳಿಸಿದೆ. ಉಳಿದ ಯಾವ ರಾಜ್ಯವೂ ಪೆಟ್ರೋಲಿಯಂ ತೆರಿಗೆಯನ್ನು ಕಡಿಮೆಗೊಳಿಸುವ ಬಗ್ಗೆ ಒಲವು ತೋರದಿರುವುದು ಗ್ರಾಹಕರ ಮೇಲೆ ಬರೆ ಎಳೆದಂತೆ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...