alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಡ್ ನ್ಯೂಸ್: 36 ದಿನಗಳ ನಂತ್ರ ಮತ್ತೆ ಏರಿಕೆಯಾಯ್ತು ಪೆಟ್ರೋಲ್-ಡಿಸೇಲ್ ಬೆಲೆ

ಒಂದು ತಿಂಗಳಿಗಿಂತಲೂ ಹೆಚ್ಚು ಸಮಯದ ನಂತ್ರ ಮತ್ತೊಮ್ಮೆ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. 36 ದಿನಗಳ ನಂತ್ರ ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿದೆ. ಕಳೆದ 36 ದಿನಗಳಲ್ಲಿ 22 ಬಾರಿ ಪೆಟ್ರೋಲ್ ಹಾಗೂ ಸುಮಾರು 18 ಬಾರಿ ಡಿಸೇಲ್ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.

ಗುರುವಾರ ಮೆಟ್ರೋ ನಗರಗಳಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆಯಲ್ಲಿ 16-17 ಪೈಸೆ ಹೆಚ್ಚಳವಾಗಿದೆ. ಡಿಸೇಲ್ ಬೆಲೆ ಲೀಟರ್ ಗೆ 10-12 ಪೈಸೆ ಹೆಚ್ಚಳವಾಗಿದೆ.ಈ ಏರಿಕೆ ನಂತ್ರ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 75.71 ರೂಪಾಯಿಯಾಗಿದೆ. ಲೀಟರ್ ಡಿಸೇಲ್ ಬೆಲೆ 67.50 ರೂಪಾಯಿಯಾಗಿದೆ.

ಕೊಲ್ಕತ್ತಾ ಹಾಗೂ ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 78.39 ರೂಪಾಯಿ ಹಾಗೂ 78.57 ರೂಪಾಯಿಯಾಗಿದೆ. ಡಿಸೇಲ್ ಬೆಲೆ 70.05 ಮತ್ತು 71.24 ರೂಪಾಯಿಯಾಗಿದೆ. ತೈಲ ಕಂಪನಿಗಳು ಪ್ರತಿ ದಿನ ತೈಲ ಬೆಲೆಯಲ್ಲಿ ಬದಲಾವಣೆ ಮಾಡುತ್ತವೆ. ಹೊಸ ಬೆಲೆ ಬೆಳಿಗ್ಗೆ 6 ಗಂಟೆಯಿಂದ ಜಾರಿಗೆ ಬರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...