alex Certify
ಕನ್ನಡ ದುನಿಯಾ       Mobile App
       

Kannada Duniya

ನೆಮ್ಮದಿ ನೀಡಿದ ಪೆಟ್ರೋಲ್: ಏರಿಕೆಯಾಯ್ತು ಡಿಸೇಲ್

ತೈಲ ಬೆಲೆ ಏರಿಕೆ ಮುಂದುವರೆದಿದೆ. ಬುಧವಾರ ಡಿಸೇಲ್ ಬೆಲೆಯಲ್ಲಿ ಏರಿಕೆಯಾಗಿದೆ. ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಡಿಸೇಲ್ ಬೆಲೆ 24 ಪೈಸೆ ಹೆಚ್ಚಳ ಕಂಡಿದ್ದು, ಲೀಟರ್ ಡಿಸೇಲ್ ಬೆಲೆ 74.35 ರೂಪಾಯಿಯಾಗಿದೆ. ಇನ್ನು ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಮಂಗಳವಾರದಂತೆ ಲೀಟರ್ ಪೆಟ್ರೋಲ್ 82.26 ರೂಪಾಯಿಗೆ ಮಾರಾಟವಾಗ್ತಿದೆ.

ಇನ್ನು ವಾಣಿಜ್ಯ ರಾಜಧಾನಿ ಮುಂಬೈನಲ್ಲೂ ಡಿಸೇಲ್ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಡಿಸೇಲ್ 25 ಪೈಸೆ ಹೆಚ್ಚಳವಾಗಿದ್ದು, ಲೀಟರ್ ಡಿಸೇಲ್ 77.93 ರೂಪಾಯಿಗೆ ಮಾರಾಟವಾಗ್ತಿದೆ. ಮುಂಬೈನಲ್ಲಿ ಕೂಡ ಇಂದು ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾಗಿಲ್ಲ.

ದೆಹಲಿ ಸರ್ಕಾರ ತೈಲದ ಮೇಲೆ ಹೇರಿರುವ ವ್ಯಾಟ್ ದರ ಇಳಿಕೆಗೆ ನಿರಾಕರಿಸಿದೆ. ಕೇಂದ್ರ ಸರ್ಕಾರ ಕಳೆದ ವಾರ ಪೆಟ್ರೋಲ್-ಡಿಸೇಲ್ ಮೇಲೆ ಹೇರಿರುವ ತೆರಿಗೆಯನ್ನು 2.50 ರೂಪಾಯಿ ಇಳಿಕೆ ಮಾಡಿತ್ತು. ಇದಾದ ನಂತ್ರ ಅನೇಕ ರಾಜ್ಯಗಳು ವ್ಯಾಟ್ ದರವನ್ನು ಇಳಿಕೆ ಮಾಡಿದ್ದವು. ಹಾಗಾಗಿ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ 5 ರೂಪಾಯಿ ಇಳಿಕೆ ಕಂಡು ಬಂದಿತ್ತು. ಆದ್ರೆ ರೂಪಾಯಿ ಮೌಲ್ಯ ಕುಸಿತ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿನ ಬದಲಾವಣೆಯಿಂದಾಗಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯಲ್ಲಿ ನಿರಂತರ ಏರಿಕೆ ಕಂಡು ಬರ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...