alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಎಟಿಎಂ ನಲ್ಲೇ ಸಿಗಲಿದೆ ವೈಯಕ್ತಿಕ ಸಾಲ

atm

ವೈಯಕ್ತಿಕ ಸಾಲಕ್ಕಾಗಿ ನೀವು ಇನ್ಮುಂದೆ ಬ್ಯಾಂಕ್ ಗೆ ಅಲೆಯಬೇಕಾಗಿಲ್ಲ. ಸಣ್ಣ ಮೊತ್ತದ ಸಾಲ ಎಟಿಎಂ ನಲ್ಲಿಯೇ ಗ್ರಾಹಕರಿಗೆ ಸಿಗಲಿದೆ. ಇಂತಹದ್ದೊಂದು ಯೋಜನೆ ರೂಪಿಸಲು ಬ್ಯಾಂಕೊಂದು ಮುಂದಾಗಿದೆ.

ಈಗ ಬ್ಯಾಂಕ್ ಗೆ ಹೋಗುವವರ ಸಂಖ್ಯೆ ಕಡಿಮೆ. ಎಟಿಎಂ ಮೂಲಕವೇ ಜನ ತಮ್ಮ ಕೆಲಸ ಮುಗಿಸಿಕೊಳ್ತಿದ್ದಾರೆ. ಹಾಗಾಗಿ ಇನ್ನಷ್ಟು ಜನರನ್ನು ಎಟಿಎಂ ಗೆ ಕರೆತರಲು ಹಾಗೂ ಸಾಲ ವಿತರಣೆ ನಿಯಮಗಳನ್ನು ಸುಲಭ ಮಾಡುವ ನಿಟ್ಟಿನಲ್ಲಿ ಬ್ಯಾಂಕ್, ಎಟಿಎಂನಲ್ಲಿ ಸಾಲ ನೀಡುವ ಬಗ್ಗೆ ಚಿಂತನೆ ನಡೆಸುತ್ತಿದೆ.

ಸಣ್ಣ ಸಾಲಕ್ಕೆ ಸಂಬಂಧಪಟ್ಟಂತೆ ಬ್ಯಾಂಕ್ ಕೆಲವೊಂದು ನಿಯಮಗಳನ್ನು ರೂಪಿಸಲಿದೆ. ಆ ನಂತ್ರ ಸಾಲದ ಅಗತ್ಯವಿರುವ ಗ್ರಾಹಕ ಎಟಿಎಂಗೆ ಹೋಗಿ ಅಲ್ಲಿ ಎಟಿಎಂ ಕಾರ್ಡ್ ಸ್ವೈಪ್ ಮಾಡಬೇಕಾಗುತ್ತದೆ. ಅವಶ್ಯಕತೆ ಇರುವಷ್ಟು ಸಾಲದ ಮೊತ್ತವನ್ನು  ಆಯ್ಕೆ ಮಾಡಬೇಕಾಗುತ್ತದೆ. ನಂತ್ರ ಬ್ಯಾಂಕ್ ನಿಯಮಗಳಿಗೆ ಒಪ್ಪಿಗೆ ನೀಡಬೇಕಾಗುತ್ತದೆ. ಪರಿಶೀಲನೆಗಾಗಿ ಮೊಬೈಲ್ ನಂಬರ್ ನೀಡಬೇಕಾಗುತ್ತದೆ.

ಕೆಲವೇ ಸೆಕೆಂಡುಗಳಲ್ಲಿ ಗ್ರಾಹಕನ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಲಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಎಸ್.ಬಿ.ಐ ಈ ಬಗ್ಗೆ ಯೋಜನೆ ರೂಪಿಸಿದೆ. 50,000 ಎಟಿಎಂಗಳಲ್ಲಿ ಈ ಸೌಲಭ್ಯ ಒದಗಿಸಲು ಎಸ್.ಬಿ.ಐ ಚಿಂತನೆ ನಡೆಸಿದೆ. ಎಸ್.ಬಿ.ಐ. ಬ್ಯಾಂಕ್ ನಲ್ಲಿ ಖಾತೆ ಹೊಂದಿದವರಿಗೆ ಮಾತ್ರ ಸಾಲ ಸೌಲಭ್ಯ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...