alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ನೌಕರರಿಗೊಂದು ಶಾಕಿಂಗ್ ಸುದ್ದಿ…!

ಸಾರ್ವಜನಿಕ ವಲಯ ಬ್ಯಾಂಕ್ ನ  ಉನ್ನತ ಮಟ್ಟದ ಅಧಿಕಾರಿಗಳು ಹೆಚ್ಚು ಸಂಭಾವನೆ ಪಡೆಯಲು ಇನ್ಮುಂದೆ ಹೆಚ್ಚೆಚ್ಚು ಪರಿಶ್ರಮಪಡುವ ಅಗತ್ಯವಿದೆ. ಭಾರತೀಯ ಸ್ಟೇಟ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಕಾರ್ಯಕ್ಷಮತೆ ಆಧಾರಿತ ವೇತನ ಯೋಜನೆ ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಿದೆ.

ಕಾರ್ಯಕ್ಷಮತೆ ಆಧಾರಿತ ವೇತನ ಯೋಜನೆ ಬಗ್ಗೆ ಸಾರ್ವಜನಿಕ ವಲಯದ ಬ್ಯಾಂಕ್ ಗಳು ಗಂಭೀರವಾಗಿ ಚಿಂತನೆ ನಡೆಸುತ್ತಿವೆ. ಜನರಲ್ ಮ್ಯಾನೇಜರ್ ಗ್ರೇಡ್ ನಿಂದ ಮೇಲಿರುವವರಿಗೆ ಈ ಯೋಜನೆ ಅನ್ವಯವಾಗಲಿದೆ. ಕಾರ್ಯಕ್ಷಮತೆ ಆಧಾರಿತ ಸಂಬಳ ಯೋಜನೆ ಖಾಸಗಿ ಬ್ಯಾಂಕ್ ಗಳಲ್ಲಿ ಜಾರಿಯಲ್ಲಿದೆ.

ಕೋಲ್ ಇಂಡಿಯಾ ಲಿಮಿಟೆಡ್ ನ ಕಾರ್ಯನಿರ್ವಾಹಕರಿಗೆ ಸರ್ಕಾರ ಪ್ರದರ್ಶನ ಆಧಾರಿತ ಸಂಬಳ ಯೋಜನೆ ಜಾರಿಗೆ ತರುವಂತೆ 2015 ರಲ್ಲಿಯೇ ಒಪ್ಪಿಗೆ ನೀಡಿತ್ತು. 7ನೇ ವೇತನ ಆಯೋಗ ಎಲ್ಲ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಕಾರ್ಯಕ್ಷಮತೆ ಆಧಾರಿತ ವೇತನ ಜಾರಿಗೆ ತರಬೇಕೆಂದು ಶಿಫಾರಸ್ಸು ಮಾಡಿದೆ. ಆಯಾ ಕ್ಷೇತ್ರಕ್ಕೆ ಅನುಗುಣವಾಗಿ ಯೋಜನೆ ಸಿದ್ಧಪಡಿಸಬೇಕೆಂದು ಹೇಳಿದೆ. ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ ಈ ಯೋಜನೆ ಜಾರಿಗೆ ತರಲು ಕೇಂದ್ರ ಸರ್ಕಾರದ ಒಪ್ಪಿಗೆ ಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...