alex Certify
ಕನ್ನಡ ದುನಿಯಾ       Mobile App
       

Kannada Duniya

ಐದು ರೂಪಾಯಿ ನಾಣ್ಯ ರದ್ದಾಗಿದ್ಯಾ? ಇಲ್ಲಿದೆ ಸತ್ಯ

ಕಳೆದ ಕೆಲವು ದಿನಗಳಿಂದ ಅಂಗಡಿ ಮಾಲೀಕರು ಹಾಗೂ ಜನಸಾಮಾನ್ಯರು ಐದು ರೂಪಾಯಿ ಹೊಸ ನಾಣ್ಯ ಸ್ವೀಕರಿಸುತ್ತಿಲ್ಲ. ಐದು ರೂಪಾಯಿಯೊಂದೇ ಅಲ್ಲ ಒಂದು ರೂಪಾಯಿ ಹೊಸ ನಾಣ್ಯವನ್ನು ಕೂಡ ಸ್ವೀಕರಿಸುತ್ತಿಲ್ಲ.

ಹೊಸ ಐದು ರೂಪಾಯಿ ನಾಣ್ಯ ನಕಲಿ ಎನ್ನುತ್ತಿರುವ ಜನರು ಹೊಸ ನಾಣ್ಯ ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದಾರೆ. ಬೇರೆಯವರು ಸ್ವೀಕರಿಸುತ್ತಿಲ್ಲ ಹಾಗಾಗಿ ನಾವೂ ಸ್ವೀಕರಿಸುತ್ತಿಲ್ಲ ಅಂತಾ ಕೆಲವರು ಹೇಳಿದ್ದಾರೆ. ಇದ್ರಿಂದ ಮಾರುಕಟ್ಟೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಹೊಸ ನಾಣ್ಯದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲವೆಂದು ಈಗಾಗಲೇ ಆರ್ ಬಿ ಐ ಹೇಳಿದೆ. ಫೆಬ್ರವರಿಯಲ್ಲಿ ನೊಟೀಸ್ ಜಾರಿ ಮಾಡಿದ್ದ ಆರ್ ಬಿ ಐ 1, 2, 5 ಮತ್ತು 10 ರೂಪಾಯಿಯ ಎಲ್ಲ ನಾಣ್ಯಗಳು ಮಾನ್ಯವೆಂದಿತ್ತು. ಯಾವುದೇ ವ್ಯಕ್ತಿ ಹಾಗೂ ಬ್ಯಾಂಕ್ ಇದನ್ನು ಸ್ವೀಕರಿಸದಿರಲು ಸಾಧ್ಯವಿಲ್ಲ ಎಂದಿತ್ತು.

ಮಾರ್ಚ್ 2009 ರಿಂದ ಮುದ್ರಣವಾಗ್ತಿರುವ ಎಲ್ಲ ನಾಣ್ಯಗಳು ಮಾನ್ಯವಾಗಿವೆ. ಮಾರುಕಟ್ಟೆಯಲ್ಲಿ ಎಲ್ಲ ನಾಣ್ಯಗಳು ಚಲಾವಣೆಯಲ್ಲಿವೆ. ಹಳೆ ನಾಣ್ಯದ ಜೊತೆ ಹೊಸ ನಾಣ್ಯ ಚಲಾವಣೆಯಲ್ಲಿದೆ. ಐದು ರೂಪಾಯಿ ಹೊಸ ನಾಣ್ಯ ರದ್ದಾಗಿಲ್ಲ. ಇದ್ರ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ನಿರ್ಭಯವಾಗಿ ಐದು ರೂಪಾಯಿ ಹೊಸ ನಾಣ್ಯವನ್ನು ಸ್ವೀಕರಿಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...