alex Certify
ಕನ್ನಡ ದುನಿಯಾ       Mobile App
       

Kannada Duniya

ಹುಚ್ಚು ಹಿಡಿಸ್ತಿದೆ ರಿಲಾಯನ್ಸ್ ಜಿಯೋ 4ಜಿ ಫ್ರೀ ಸಿಮ್

reliance

ರಿಲಾಯನ್ಸ್ ಜಿಯೋ 4ಜಿ ಉಚಿತ ಸಿಮ್ ಗ್ರಾಹಕರಿಗೆ ಹುಚ್ಚು ಹಿಡಿಸಿದೆ. ಉಚಿತ ಸಿಮ್ ಪಡೆಯಲು ಭಾರತೀಯರು ಮುಗಿ ಬಿದ್ದಿದ್ದಾರೆ. ರಿಲಾಯನ್ಸ್ ಅಂಗಡಿಗಳಲ್ಲಿ ದೊಡ್ಡ ಕ್ಯೂ ಕಾಣಸಿಗ್ತಾ ಇದೆ. ಕಳೆದೊಂದು ದಿನದಲ್ಲಿ ಉಚಿತ ಸಿಮ್ ಸಿಕ್ಕಾಪಟ್ಟೆ ಸೇಲ್ ಆಗ್ತಾ ಇದೆ.

ಭಾರತದ ಅನೇಕ ನಗರಗಳಲ್ಲಿ ಉಚಿತ ಸಿಮ್ ಪಡೆಯಲು ಜನ ರಾತ್ರಿ ನಿದ್ದೆಗಟ್ಟಿದ್ದಾರೆ. ಭುವನೇಶ್ವರ, ಅಹಮದಾಬಾದ್, ಲಕ್ನೋ, ಭೋಪಾಲ್ ಮತ್ತು ಮೊಹಾಲಿಯಲ್ಲಿ ಜನರು ಸರತಿ ಸಾಲಿನಲ್ಲಿ ನಿಂತಿದ್ದರು. ರಾತ್ರಿ 2 ಗಂಟೆಗೆ ಎದ್ದು ಬಂದಿದ್ದ ಜನರು ಅಂಗಡಿ ಮುಂದೆ ಕಾದು ಕುಳಿತಿದ್ದರು.

ರಿಲಾಯನ್ಸ್ ನ ಈ ಆಫರ್ ಕೆಲವು ಸ್ಮಾರ್ಟ್ ಫೋನ್ ಬ್ರಾಂಡ್ ಗಳಿಗೆ ಸಿಗಲಿದೆ. ಸ್ಯಾಮ್ ಸಂಗ್, ಎಲ್ ಜಿ, ಮೈಕ್ರೋಮ್ಯಾಕ್ಸ್, ಆಸಸ್, ಟಿಸಿಎಲ್, ಅಲ್ಕಾಟೆಲ್ ಮತ್ತು ಎಲ್ ವೈಫೈ 4ಜಿ ಡಿವೈಸ್ ಗಳಿಗೆ ಇದು ಲಭ್ಯವಿದೆ. ಸಿಮ್ ಪಡೆಯಲು ಗುರುತಿನ ಚೀಟಿ, ವಿಳಾಸ ದಾಖಲೆ ಹಾಗೂ ಎರಡು ಪಾಸ್ ಪೋರ್ಟ್ ಫೋಟೋ ಕೊಡಬೇಕಾಗುತ್ತದೆ. ಉಚಿತ ಸಿಮ್ 90 ದಿನಗಳವರೆಗೆ ವ್ಯಾಲಿಡಿಟಿ ಹೊಂದಿರಲಿದೆ. ಗ್ರಾಹಕರು 90 ದಿನಗಳವರೆಗೆ ಉಚಿತ ಅನಿಯಮಿತ 4ಜಿ ಡೇಟಾ ಬಳಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...