alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಂಚಣಿದಾರರಿಗೆ ಇಲ್ಲಿದೆ ಶುಭ ಸುದ್ದಿ

ನವದೆಹಲಿ: ಪಿಂಚಣಿದಾರರಿಗೆ ಶುಭ ಸುದ್ದಿ ಇಲ್ಲಿದೆ. ಇನ್ನುಮುಂದೆ ತಪ್ಪಲಿದೆ ಆಧಾರ್ ಕಿರಿಕಿರಿ. EPFO ಪಿಂಚಣಿ ಯೋಜನೆಯ ಅಡಿಯಲ್ಲಿ ಆಧಾರ್ ಇಲ್ಲದೆಯೂ ಪಿಂಚಣಿದಾರರು ತಮ್ಮ ಪಿಂಚಣಿಯನ್ನು ಪಡೆದುಕೊಳ್ಳಬಹುದಾಗಿದೆ.

ಡಿಜಿಟಲ್ ಜೀವನ್ ಪ್ರಮಾಣ್ ವ್ಯವಸ್ಥೆಯಿಂದಾಗಿ ಪಿಂಚಣಿದಾರರಿಗೆ ಸಮಸ್ಯೆಯಾಗಿತ್ತು. ಪಿಂಚಣಿ ವಿತರಿಸುವ ಪೋಸ್ಟ್ ಆಫೀಸ್ ಮತ್ತು ಬ್ಯಾಂಕ್ ಗಳಿಗೆ EPFO ವತಿಯಿಂದ ಈ ಕುರಿತು ಸೂಚನೆ ನೀಡಲಾಗಿದೆ.

ಆಧಾರ್ ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ತಿಳಿಸಲಾಗಿದ್ದು, ಆಧಾರ್ ಇಲ್ಲದೆಯೂ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಬಹುದಾಗಿದೆ. ಕಾಗದದ ರೂಪದಲ್ಲಿಯೂ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ತಿಳಿಸಲಾಗಿದೆ.

ಆಧಾರ್ ಕಾರ್ಡ್ ಇದ್ದವರು ಒಂದು ವೇಳೆ ಬೆರಳಚ್ಚಿನ ಗುರುತು ದೃಢೀಕರಣದಲ್ಲಿ ವಿಫಲವಾದರೂ ಅದನ್ನು ಪಿಂಚಣಿಗೆ ಪರಿಗಣಿಸುವಂತೆ ತಿಳಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...