alex Certify
ಕನ್ನಡ ದುನಿಯಾ       Mobile App
       

Kannada Duniya

ಪೇಟಿಎಂಗೆ ಖಡಕ್ ವಾರ್ನಿಂಗ್ ನೀಡಿದ ಆರ್.ಬಿ.ಐ.

ಭಾರತದ ಅತಿ ದೊಡ್ಡ ಪೇಮೆಂಟ್ ಬ್ಯಾಂಕ್ ಆದಂತಾ ಪೇಟಿಎಂಗೆ ಭಾರತೀಯ ರಿಸರ್ವ್ ಬ್ಯಾಂಕ್ ಖಡಕ್ ವಾರ್ನಿಂಗ್ ನೀಡಿದೆ. ಪೇಟಿಎಂಗೆ ನೂತನ ಬಳಕೆದಾರರನ್ನು ಸೇರಿಸಿಕೊಳ್ಳುವ ಕಾರ್ಯವನ್ನು ಈ ಕೂಡಲೇ ನಿಲ್ಲಿಸುವಂತೆ ಸೂಚನೆ ನೀಡಿದೆ. ಜೂನ್ 20ರಂದೇ ಆರ್ಬಿಐ, ಹೊಸ ಗ್ರಾಹಕರನ್ನು ಪೇಟಿಎಂ ಬಳಕೆಗೆ ನಿರ್ಬಂಧ ಹೇರುವಂತೆ ಆದೇಶ ನೀಡಿದೆ.

ನೂತನ ಗ್ರಾಹಕರನ್ನು ಸೇರಿಸಿಕೊಳ್ಳುವ ವೇಳೆ ಪೇಟಿಎಂ ತನ್ನ ನಿಷ್ಠೆಯನ್ನು ಪ್ರದರ್ಶಿಸಿಲ್ಲ. ಕೆವೈಸಿ ನಂಬರ್ ನಲ್ಲೂ ಹಲವು ಬಾರಿ ಪೇಟಿಎಂ ಪ್ರತಿ ಮೂರರಿಂದ ನಾಲ್ಕು ವ್ಯಕ್ತಿಗಳಲ್ಲಿ ನಿಯಮ ಉಲ್ಲಂಘನೆ ಮಾಡ್ತಿದೆ ಅಂತ ಆರ್ಬಿಐ ತಿಳಿಸಿದೆ. ಈ ಬಗ್ಗೆ ಆರ್ಬಿಐಗೆ ಪ್ರತಿಕ್ರಿಯೆ ನೀಡಿರುವ ಪೇಟಿಎಂ ಆಡಳಿತ ಮಂಡಳಿ, ಸದ್ಯ ಪೇಟಿಎಂ ತನ್ನ ಖಾತೆಗಳಲ್ಲಿ ಬದಲಾವಣೆ ತರೋದಕ್ಕೆ ಹೊರಟಿದೆ. ಖಾತೆ ತೆರೆಯುವ ಪ್ರಕ್ರಿಯೆ ಮತ್ತು ಈಗಾಗ್ಲೇ ಇರುವ ಖಾತೆಗಳ ನಿರ್ವಹಣೆ ಬಗ್ಗೆ ಮತ್ತಷ್ಟು ಸುಧಾರಣಾ ಕ್ರಮಗಳನ್ನ ಕೈಗೊಳ್ಳುವ ಪ್ರಕ್ರಿಯೆ ನಡೆಸುತ್ತಿದೆ ಅಂತ ಸ್ಪಷ್ಟನೆ ನೀಡಿದೆ.

ಕರೆಂಟ್ ಅಕೌಂಟ್ಗಳಿಗೆ ಗ್ರಾಹಕರನ್ನು ಸೇರಿಸಿಕೊಳ್ಳುವ ಕಾರ್ಯವನ್ನು ನಿಲ್ಲಿಸಲಾಗಿದೆಯಂತೆ. ಇನ್ನು ಪೇಟಿಎಂ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಥಾನದಿಂದ ರೇಣು ಅವರನ್ನು ತೆಗೆದು ಹಾಕುವಂತೆ ಪೇಟಿಎಂ ಆಡಳಿತ ಮಂಡಳಿಗೆ ಆರ್ಬಿಐ ಸೂಚಿಸಿದೆ. ಬ್ಯಾಂಕ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿರುವ ರೇಣು, ಈಗಾಗ್ಲೇ ಖಾಸಗಿ ವಲಯದಲ್ಲಿ ಮತ್ತೊಂದು ಬ್ಯುಸಿನೆಸ್ ಹೊಂದಿದ್ದಾರೆ. ಹಾಗಾಗಿ ಪೇಟಿಎಂ ನಲ್ಲಿ ಅವರು ಅಷ್ಟೇ ನಿಷ್ಠರಾಗಿ ಕಾರ್ಯನಿರ್ವಹಿಸ್ತಾರೆ ಅನ್ನೋ ನಂಬಿಕೆ ಇಲ್ಲ ಅಂತ ಆರ್ಬಿಐ ಕಳವಳ ವ್ಯಕ್ತಪಡಿಸಿದೆ.

ಆದ್ರೆ ಆರ್ಬಿಐ ಸೂಚನೆ ಮೇರೆಗೆ ರೇಣು ಅವರನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಿಸಿಕೊಳ್ಳಲಾಗಿದೆ. ಈಗ ಅವರನ್ನ ವಜಾಗೊಳಿಸೋದು ಸಾಧ್ಯವಿಲ್ಲ ಅಂತ ಪೇಟಿಎಂ ಆಡಳಿತ ಮಂಡಳಿ ತಿಳಿಸಿದೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದ್ರೆ ಪೇಟಿಎಂ ಮತ್ತು ಆರ್ಬಿಐ ನಡುವೆ ಟಗ್ ಆಫ್ ವಾರ್ ನಡೀತಿರೋದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...