alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಪೇಟಿಎಂನಲ್ಲಿ ಖರೀದಿ ಮಾಡಬಹುದು ಮ್ಯೂಚುಯಲ್ ಫಂಡ್

ಪೇಟಿಎಂ ಮನಿ ಆಪ್ ಬಿಡುಗಡೆ ಮಾಡಿದೆ. ಇದ್ರ ಮೂಲಕ ಗ್ರಾಹಕರು ಮ್ಯೂಚುಯಲ್ ಫಂಡ್ ಕೂಡ ಖರೀದಿ ಮಾಡಬಹುದು. 2023ರ ಸುಮಾರಿಗೆ ಮ್ಯೂಚುಯಲ್ ಫಂಡ್ ಹೂಡಿಕೆ 2 ಕೋಟಿಯಿಂದ 5 ಕೋಟಿಯಾಗಲಿದೆ ಎಂಬ ವಿಶ್ವಾಸದಲ್ಲಿ ಕಂಪನಿಯಿದೆ.

ಪೇಟಿಎಂ ಮನಿ ಆಪ್ ಸಹಾಯದಿಂದ ಸ್ಮಾರ್ಟ್ಫೋನ್ ಮೂಲಕವೇ ನೀವು ಮ್ಯೂಚುಯಲ್ ಫಂಡ್ ಖರೀದಿ ಮಾಡಬಹುದಾಗಿದೆ. ಈ ಆಪ್ ಮೂಲಕ ನೇರವಾಗಿ ಮ್ಯೂಚುಯಲ್ ಫಂಡ್ ಖರೀದಿ ಮಾಡಿದ್ರೆ ಶೇಕಡಾ 1ರಷ್ಟು ಹೆಚ್ಚುವರಿ ರಿಟರ್ನ್ ನಿಮಗೆ ಸಿಗಲಿದೆ. ಇದ್ರಲ್ಲಿ ಯಾವುದೇ ಕಮಿಷನ್ ವ್ಯವಹಾರವಿಲ್ಲ.

ಪೇಟಿಎಂ ಮನಿಯಲ್ಲಿ 25 ದೊಡ್ಡ ಕಂಪನಿಗಳ ಯೋಜನೆಗಳಿವೆ. ಆದಿತ್ಯ ಬಿರ್ಲಾ ಸನ್ ಲೈಫ್, ಆಕ್ಸಿಸ್ ಮ್ಯೂಚುಯಲ್ ಫಂಡ್, ಎಚ್ಡಿಎಫ್ಸಿ ಮ್ಯೂಚುಯಲ್ ಫಂಡ್, ಐಸಿಐಸಿಐ ಎಂಎಫ್, ಕೋಟಕ್ ಎಂಎಫ್, ಎಲ್ಐಸಿ ಎಂಎಫ್, ಎಸ್ಬಿಐ ಎಂಎಫ್, ರಿಲಯನ್ಸ್ ಎಂಎಫ್ ಇಂತಹ ಕಂಪನಿಗಳ ಯೋಜನೆಗಳಿವೆ.

ಈ ಆಪ್ ನಲ್ಲಿ ನೀವು ಯಾವುದೇ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ. ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಪೇಟಿಎಂ ಮನಿ ಟೈಪ್ ಮಾಡಬೇಕು. one97 communication ಆಪ್ ಸಿಗಲಿದೆ. ಅದನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಇ-ಮೇಲ್ ಐಡಿ ಅಥವಾ ಫೋನ್ ನಂಬರ್ ಮೂಲಕ ನಿಮ್ಮ ಅಕೌಂಟ್ ತೆರೆಯಬೇಕು. ನಂತ್ರ ಮ್ಯೂಚುಯಲ್ ಫಂಡ್ ಖರೀದಿ ಹಾಗೂ ಮಾರಾಟ ಮಾಡಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...